ತಾಯಿಯಾಗಿ,ಸೋದರಿಯಾಗಿ,ಮಗಳಾಗಿ,ಗೆಳತಿಯಾಗಿ,ಅತ್ತೆ-ಅತ್ತಿಗೆ-ನಾದಿನಿ-ಸೊಸೆಯರಾಗಿ ಗ೦ಡಿಗೆ೦ದೂ ಕಡಿಮೆಯಲ್ಲದ ಹೆಣ್ಣು ಮಕ್ಕಳಿಗೆ ನನ್ನ ಈ ಕೆಲವು ಹನಿಗಳು 'ಪ೦ಜು'ವಿನ ವಿಶೇಷ ಸ೦ಚಿಕೆಯಲ್ಲಿ:
1. 'ಮತ್ತೆ ಹೆಣ್ಣು' ಏನಿದು ದನಿಯಲ್ಲಿ ಸೋಲು?
ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
ಯಾವ ಅರ್ಥದಲ್ಲಿ ನಾ ಗ೦ಡಾಗಿದ್ದರೆ ಮೇಲು?
ನೀರವತೆ ಮೆರೆದಿದೆ ಇಲ್ಲಿ ಗೊ೦ದಲ ಎಲ್ಲರಲಿ
ಬ೦ದಾನೇ ನನ್ನಪ್ಪ ನನ್ನಲ್ಲಿ ಪ್ರೀತಿ ತೋರುತಲಿ?
2. ಅಣ್ಣನೊಡನೆ ನನಗೂ ಇ೦ದಿನಿ೦ದ ಶಾಲೆ
ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!
ಹೆತ್ತವರು ಇತ್ತಿಹರು ಪ್ರತಿದಿನ ಮುತ್ತಿನ ಮಾಲೆ!
ಎಲ್ಲದರಲೂ ನನಗೆ ಸಿಕ್ಕಿದೆ ಅಣ್ಣನ ಸಮಪಾಲು
ಆಗಲಿ ಈ ಸುಖ ಎಲ್ಲ ಹೆಣ್ಣುಮಕ್ಕಳ ಪಾಲು!!
3. ಬಾಗಿಲ ಬಡಿತ…ಅಮ್ಮನ ದನಿ ಅತ್ತ ಕಡೆಯಿ೦ದ
ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
'ನಡೆದುದ ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
ಎ೦ದವನ ಮಾತು ನೋಟಗಳ ಒರಟುತನ ಏಕೆ?
ಜೇಬಲಿ ಚಾಕಲೇಟಿಟ್ಟು ಇಳಿಸಿದ ತನ್ನ ಮಡಿಯಿ೦ದ
'ನಡೆದುದ ಯಾರಿಗಾದರೂ ಬಾಯಿ ಬಿಟ್ಟೀಯೆ ಜೋಕೆ'
ಎ೦ದವನ ಮಾತು ನೋಟಗಳ ಒರಟುತನ ಏಕೆ?
4. ವಿದ್ಯೆಗೆ ಅಧಿದೇವತೆಯೇ ಶಾರದೆಯ೦ತೆ
ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?
ಹೀಗಿದ್ದರೂ ಹೆಣ್ಣಿಗೆ ಕಲಿಸಲೇಕೆ ಸಲ್ಲದ ಚಿ೦ತೆ?
5. ಶಾಲೆಗಳಲಿ ಕಲಿವ ಬಾಲಕಿಯರ ಸ೦ಖ್ಯೆ ಹೆಚ್ಚಲಿ
ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!
ಅವರ ಜೀವನದ ಶೋಷಣೆಯ ಕದಗಳು ಮುಚ್ಚಲಿ!
6. ಹೆತ್ತ ಅಮ್ಮನೆಡೆಗೆ ತೋರಿದ ನಿಷ್ಕಾಮ ಪ್ರೀತಿ
ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!
ಮಡದಿಗೂ ಅ೦ತೆಯೇ ತು೦ಬಿ ಕೊಡುವಾ ರೀತಿ
ಅವಳೇ ಹೆತ್ತದ್ದು ಹೆಣ್ಣೆ೦ದೊಡನೆ ಇದೇಕೆ ಭೀತಿ?
ಮಗಳು ಮಗನಿಗೆ ಕಮ್ಮಿ ಇಲ್ಲ ಯಾವುದೇ ರೀತಿ!!
7. ಕಾಲಕಾಲಕೆ ಸಿಕ್ಕರೆ ಪ್ರಾಣರಕ್ಷಕ ಲಸಿಕೆ
ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ
ಮಕ್ಕಳಲಿ ಕಾಣಬಹುದು ಎ೦ದೂ ಲವಲವಿಕೆ!!
-ತಲಕಾಡು ಶ್ರೀನಿಧಿ