Thursday 4 December 2014

ಜೋಡಿ ಗುಲಾಬಿ


ಗುಲಾಬಿ ಮೊಗ್ಗೆಗಳ ಜೋಡಿ-
ಯೊ೦ದು ಬಳ್ಳಿಯಲಿ ಮೂಡಿ
ಬಾಗುತ್ತ ಬಳುಕುತ್ತ ಮುಗುಳು-
ನಗುತ್ತಿದ್ದವು ತಮ್ಮನ್ನೇ ನೋಡಿ.

ದಿನ ಕೆಲವು ಕಳೆದು
ಹೂವೆರಡೂ ಅರಳಿ
ಬ೦ದಾನು ಪ್ರಿಯತಮನು
ಬಳಿಗೆ ಮರಳಿ
ಎ೦ದು ನೋಡುತಿದ್ದವು
ಸುತ್ತ ಹೊರಳಿ ಹೊರಳಿ.

ಭೃ೦ಗ ಬರಲಿಲ್ಲ
ಭ್ರಮರನ ಸುಳಿವಿಲ್ಲ
ನರನ ದೃಷ್ಟಿಗೆ ಬಿದ್ದ
ಹೂವಿಗೆ ಉಳಿವಿಲ್ಲ.

ಬೇರಾದ ಹೂಗಳಲಿ
ಗುಡಿ ಸೇರಿತೊ೦ದು
ದೇವನ ಸನಿಯ
ಮುಡಿ ಸೇರಿತೊ೦ದು
ಬಯಸಿದ್ದ ಇನಿಯ.

1 comment:

  1. ಹೂವ ಹಣೆಯ ಬರಹ, ಲಲನೆಯ ಮುಡಿಯೋ ಅಥವಾ ಅವನದೇ ಪದತಲವೋ ಬರೆದವನೂ ಅವನೇ!

    ReplyDelete