ಪ್ರವಾಸ:
(ಆಸ್ಟ್ರೇಲಿಯಾ - ಸಿಡ್ನಿ ಮತ್ತು ಮೆಲ್ಬೋರ್ನ್)
ಪ್ರವಾಸದ
ದಿನಾಂಕ: 13-07-2017 ಬೆಂಗಳೂರು ಬಿಟ್ಟು 28-07-2017
ಬೆಂಗಳೂರಿಗೆ ಹಿಂತಿರುಗಿದ್ದುದು (ಸಿಂಗಪೂರ್ ಮಾರ್ಗ)
(14
ಜುಲೈ ಸಿಡ್ನಿ ತಲುಪಿ ಅಲ್ಲಿಂದ 21 ಜುಲೈ ಮೆಲ್ಬೋರ್ನ್ ತಲುಪಿ 27 ಜುಲೈ ಮೆಲ್ಬೋರ್ನ್ ನಿಂದ
ಹಿಂದಿರುಗಿದ್ದುದು)
ಆಭಾರಿ:
ವೆಂಕಟೇಶ್
- ಈ ಪ್ರವಾಸದ ರೂವಾರಿ
ಭಗವತಿ,ಜ್ಯೋತಿ
ಹಾಗೂ ಗೀತಾ - ಉತ್ತಮ ಒಡನಾಟಕ್ಕೆ
ಮ್ಯಾಕ್ಸ್, ಪೀಟರ್ ಹಾಗೂ ಸೋಫಿ – ಮಾರ್ಗದರ್ಶಿಗಳು
ಮೀರಾ
ಮತ್ತು ಶೇಷಾದ್ರಿ - ಒಂದು ಸುಂದರ ಲಂಚ್ ಆತಿಥೇಯರು
ಸಿಂಗಪುರ್
ಏರ್‍ಲೈನ್ಸ್ ಹಾಗೂ ವರ್ಜಿನ್ ಆಸ್ಟ್ರೇಲಿಯಾ - ವಿಮಾನಯಾನ
ಟ್ರಾವೆಲಾಡ್ಜ್
(ಸಿಡ್ನಿ), ಕೈನೆಟಾನ್
ಬುಷ್‍ಲ್ಯಾಂಡ್ ರೆಸಾರ್ಟ್ಸ್ ಹಾಗೂ ಐಬಿಸ್ (ಮೆಲ್ಬೋರ್ನ್) - ತಂಗುದಾಣ
ಫೆಬ್ರವರಿಯಲ್ಲಿ
ಮಕ್ಕಳೊಂದಿಗೆ ಬಾಲಿ ಸುತ್ತಿ ಬಂದ ನಮಗೆ ಇಷ್ಟರಲ್ಲೇ ಇನ್ನೊಂದು ವಿದೇಶ ಪ್ರಯಾಣ ಎಂಬುದು ದೊಡ್ಡ
ಸರ್ಪ್ರೈಸ್ ಆಗಿತ್ತು. ಅದರಲ್ಲೂ ಆಸ್ಟ್ರೇಲಿಯಾದ ಎರಡು ಮುಖ್ಯ ನಗರಿಗಳ ಹದಿನೈದು ದಿನದ
ಸುತ್ತಾಟಕ್ಕೆ ಸಿದ್ಧರಾದೆವು. ಚಳಿ ಹೆಚ್ಚಿರುವ ಮುನ್ಸೂಚನೆ ಇದ್ದುದರಿಂದ ಅದಕ್ಕೆ ಬೇಕಾದ
ಥರ್ಮಲ್ಸ್ ಜಾಕೆಟ್ ಬೂಟುಗಳು ಅಲ್ಲದೆ....ನಾನು ಉಪಯೋಗಿಸಲು ಹಿಂಜರಿಯುತ್ತಿದ್ದ ತುಂಬು ತೋಳಿನ
ಅಂಗಿಗಳು ಮಗಳ ಅಮೆಝಾನ್ ವ್ಯಾಪಾರದಲ್ಲಿ ಬಂದು ಮನೆ ಸೇರಿದ್ದವು. ಆರು ದಿನದ ರೆಸಾರ್ಟ್ ವಾಸದ
ಜೊತೆಗೆ ಅಲ್ಲುಳಿಯುವ ಹೊಟೆಲ್ ಸಿಡ್ನಿಯಿಂದ ಮೆಲ್ಬೊರ್ನ್ ವಿಮಾನಯಾನ ಅಲ್ಲದೆ ಒಂದು ಹಾಪ್ ಆನ್
ಹಾಪ್ ಆಫ್ ಬಸ್/ಕ್ರೂಯಿಸ್ ಎಲ್ಲ ಆನ್ಲೈನ್ ಬುಕಿಂಗ್ ಆಗಿತ್ತು. ನಿಗದಿತ ಸಮಯಕ್ಕೆ ಸಾಕಷ್ಟು
ಮುಂಚೆಯೇ ವಿಮಾನ ನಿಲ್ದಾಣ ತಲುಪಿ ಎಲ್ಲ ಫಾರ್ಮಾಲಿಟಿಗಳನ್ನು ಮುಗಿಸಿ ಒಂದು ಗಂಟೆ ಮೊದಲೇ
ನಿರ್ದಿಷ್ಟ ವಿಮಾನಕ್ಕೆ ಸಜ್ಜಾಗಿ ಕುಳಿತಿದ್ದೆವು.ಒಂದು ಸಣ್ಣ ತಾಂತ್ರಿಕ ದೋಷದಿಂದ ಹೊರಡುವಲ್ಲಿ
ಸುಮಾರು ಒಂದು ಗಂಟೆಯ ಕಾಲ ತಡವಾದಾಗ...ಸಿಂಗಪುರದಲ್ಲಿ ಮುಂದಿನ ವಿಮಾನ ಹತ್ತಲು ಹೆಚ್ಚು
ಸಮಯವಿರದೆ ಸ್ವಲ್ಪ ಆತಂಕವಾದರೂ ..... ತೊಂದರೆ ಏನೂ ಆಗಲಿಲ್ಲ. 14ರಂದು ಬೆಳಗ್ಗೆ ನಿರ್ದಿಷ್ಟ
ಸಮಯಕ್ಕೆ ಸಿಡ್ನಿಯಲ್ಲಿಳಿದು ಇಮ್ಮಿಗ್ರೇಷನ್ ಚೆಕ್ ಆಗುವಷ್ಟರಲ್ಲಿ ಮೊದಲೇ ಬುಕ್ ಆಗಿದ್ದ
ಗಾಡಿಯೊಂದು ನಮ್ಮನ್ನು ಹೊಟೆಲ್ ತಲುಪಿಸಲು ಸನ್ನದ್ಧವಾಗಿತ್ತು.....ಜೊತೆಗೆ ಸ್ವಾಗತ ಮಳೆ ಕೂಡ!
ಮಳೆ
ಹನಿಯುತ್ತಿರುವಂತೆಯೇ ಒಂದು ಮ್ಯಾಕ್ಸಿಕ್ಯಾಬ್ ಹಿಂದೆ ಲಗೇಜ್ ತುಂಬಲು ಒಂದು ಕ್ಯಾಬಿನ್ ಜೊತೆ
ನಮ್ಮನ್ನು ಹೊಟೆಲ್ ಟ್ರಾವೆಲಾಡ್ಗ್ ತಲುಪಿಸಿತು. ಚೆಕ್ ಇನ್ ಸಮಯ ಮಧ್ಯಾನ್ಹ ಆದ್ದರಿಂದ ಬುಕ್
ಎರಡು ಕೋಣೆಗಳಿಗೆ ಇದ್ದರೂ ಒಂದು ಕೋಣೆಯ ವ್ಯವಸ್ಥೆ ಆಯಿತು. ಲಗೇಜ್ ಅಲ್ಲಿ ತುಂಬಿ ಎಲ್ಲರೂ
ಫ್ರೆಷ್ ಆಗಿ......ಮೂರು ಕಿ ಮೀ ದೂರದಲ್ಲಿದೆಯೆಂದು ಗೂಗಲಪ್ಪ ತಿಳಿಸಿದ್ದ ಮಾಯಾ ಇಂಡಿಯನ್
ರೆಸ್ಟುರಾಗೆ ಹೋಗಿ ದೋಸೆ ಇಡ್ಲಿಗಳ ರುಚಿ ಕಂಡೆವು. ಎದುರಿನಲ್ಲೇ ಕಂಡ ಬಸ್ ಸ್ಟಾಪ್ನ ಲ್ಲಿ CBD ಹೋಗಲು ಟಿಕೆಟ್ ಕೊಂಡೆವು.( ಇದು ಏಕೆ
ಹೇಳುತ್ತಿದ್ದೇನೆಂದರೆ ಬಸ್ಗಳಲ್ಲಿ ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರವೇ ಪ್ರವೇಶ ಸಾಮಾನ್ಯವಾಗಿ)
ಅವನು ಇಳಿಸಿದ ಕಡೆಯಿಂದ ಸರಿಯಾಗಿ ಮಾಹಿತಿ ದೊರಕದಿದ್ದರಿಂದ ಡೈಮಂಡ್ ಹಾರ್ಬರ್ (ಅಲ್ಲಿಂದ cruise ಮೊದಲೇ ಬುಕ್ ಆಗಿತ್ತು ಹಾಪ್ ಆನ್ ಹಾಪ್ ಆಫ್
ಸರ್ವಿಸ್) ತಲುಪಿದೆವು. ಆಗ ತಾನೇ ಒಂದು ಅಲ್ಲಿಂದ ಹೊರಟುಬಿಟ್ಟಿತ್ತು. ಮುಂದಿನ ಕ್ರೂಯಿಸ್ಗಾುಗಿ
ಕಾದು ಕುಳಿತೆವು. captain cook cruise ಮುಂದಿನ ಟ್ರಿಪ್ ಹತ್ತಿದವರೇ ಅಲ್ಲಿಂದ
ಹಾರ್ಬರ್ ಬ್ರಿಡ್ಗ್ ಆ ಬೃಹತ್ ಸೇತುವೆ ಮತ್ತು ಅಪೇರ ಹೌಸ್ ಇವುಗಳಿಗೆ ಭೇಟಿ ಅವಿಸ್ಮರಣೀಯ.
ಅಲ್ಲಿಂದ ಸಂಜೆ ಮತ್ತೆ ಡೈಮಂಡ್ ಹಾರ್ಬರ್ ಬಂದು ಅಲ್ಲಿಯೇ ಇದ್ದ sealife museum ನೋಡಿ ಖುಷಿ ಪಟ್ಟೆವು. ಅಲ್ಲಿಂದ ಮತ್ತೆ
ಟ್ಯಾಕ್ಸಿ ಹಿಡಿದು ಮಾಯಾದಲ್ಲಿ ಊಟ ಮುಗಿಸಿ ಕೋಣೆ ತಲುಪಿದೆವು. ಮಧ್ಯಾನ್ಹವೇ ಎರಡನೇ ಕೊಟಡಿ
ಪಡೆದಿದ್ದೆವು. ತಣ್ಣನೆಯ ಊರಿನಲ್ಲಿ ಬೆಚ್ಚಗೆ ನಿದ್ರೆ ಮಾಡಿದೆವು.
ಮಾರನೆಯ
ದಿನ(16 july) hopon-hopoff ಬಸ್ ಬುಕ್ ಆಗಿತ್ತಾದ್ದರಿಂದ ರೂಮಿನಲ್ಲೇ ಅವಲಕ್ಕಿ(ಸಿದ್ಧಪಡಿಸಿ ಕೊಂಡೊಯ್ದದ್ದು)
ಫಲಹಾರ ಮುಗಿಸಿ ಹತ್ತಿರದ ವಿಲಿಯಮ್ಸ್ ರಸ್ತೆಯ ಬಳಿ ಬಸ್ ಹತ್ತಲು ನಡೆದೆವು. ಅಲ್ಲಿ ನಿಗದಿತ
ಜಾಗಕ್ಕೂ ನಾವು ನಿಲ್ದಾಣ ಎಂದುಕೊಂಡ ಜಾಗಕ್ಕೂ ಸ್ವಲ್ಪ ದೂರ ಇದ್ದದ್ದರಿಂದ ಕಣ್ಣೆದುರೇ ಒಂದು ಬಸ್
ಹೋಗಲು ಆ ಸರ್ವಿಸ್ಗೆ ಫೋನ್ ಮಾಡಿ ಇನ್ನಷ್ಟು ನಡೆದು ಅಲ್ಲಿ ತಲುಪುವಷ್ಟರಲ್ಲೇ ಆ ಏಜೆಂಟ್ ಒಬ್ಬ
ಅಲ್ಲಿಯೇ ಬಂದು ನಮಗೆ ಸಂಶಯ ನಿವಾರಣೆ ಮಾಡಿದ. ಅದೋ ಬಸ್. ಹತ್ತಿದೆವು. ಬಟಾನಿಕಲ್ ಗಾರ್ಡನ್
ಇಳಿದು ಸುಂದರ ತಾಣದಲ್ಲಿ ಸುತ್ತಾಡಿದೆವು. ಅದೇ ಸ್ಥಳದಿಂದ ಮುಂದೆ ಸಾಗುತ್ತಾ ಮುಂದಿನ
ವೀಕ್ಷಣೆಗಾಗಿ ಪವರ್ ಮ್ಯೂಸಿಯಮ್ ಬಳಿ ಇಳಿದೆವು. ಅಲ್ಲಿ ಹೋದರೆ ಯಾಕೋ ಆಸಕ್ತಿ ಮೂಡಲಿಲ್ಲ. ಸರಿ
ಮುಂದಿನ ಬಸ್ ಹಿಡಿದು ಚೈನೀಸ್ ಗಾರ್ಡನ್ ಹೋಗಿಳಿದೆವು. ಅಲ್ಲಿ ಒಂದು ಬೆಂಚಿನ ಮೇಲೆ ಕುಳಿತು
ಕೈಲಿದ್ದ ತಿಂಡಿ ಚೀಲದ ಭಾರ ಇಳಿಸಿದೆವು. ಆ ಸುಂದರ ಉದ್ಯಾನಕ್ಕೆ ಟಿಕೆಟ್ ಪಡೆದು ಸುಮಾರು ಸಮಯ
ಕಳೆದೆವು. ಆ ವೇಳೆಗೆ ಸಂಜೆಯಾಗುತ್ತಾ ಬಂದಿತ್ತು. ಅಲ್ಲಿ ಸಂಜೆ 5.30ಕ್ಕೆಲ್ಲಾ ಸೂರ್ಯಾಸ್ತ.
ಷಾಪಿಂಗ್ ಮಾಡಲು ಯೋಗ್ಯವೆಂದು ಕೇಳಿದ್ದ ಚೈನಾಟೌನ್ ಹೋದರೆ...ಬಾಗಿಲು ಬಂದ್. ಎದುರಿಗೇ ಇದ್ದ
ಹೇಯ್ಸ್ ಮಾರ್ಕೆಟ್ ಕೈ ಬೀಸಿತು. ಸರಿ
ನುಗ್ಗಿದೆವು. light ಆಗಿ
ಶಾಪಿಂಗ್ ಮಾಡುವಷ್ಟರಲ್ಲೇ ಕಾಲು ಪದ ಹೇಳೋಕೆ ಶುರು.ಮತ್ತೆ ಮಾಯಾ ಹೋಗಿ ಹೊಟ್ಟೆ ತುಂಬಿಕೊಂಡು
ರೂಮ್ ಸೇರಿದೆವು.
ಮರುದಿನ(17 july) ಬೆಳಗ್ಗೆಯೇ ಹಾಪ್ ಆನ್ ಹಾಪ್ ಆಫ್ ಬಸ್
ಏರಿದವರೇ ಮನಮೋಹಕ ಬಾಂಡಿ ಬೀಚ್ ತಲುಪಿದೆವು. ವಾಹ್.... ಎಷ್ಟು ಸ್ವಚ್ಛ...ಎಷ್ಟು
ಸುಂದರ.......ಜನಸಂದಣಿಯೂ ಇರದಿದ್ದ ಈ ಕಡಲ ಬದಿಯಲ್ಲಿ ಸಮಯದ ಪರಿವೆಯೇ ಇರದಷ್ಟು ಮನೋಲ್ಲಾಸ.
ಅಲ್ಲಿಂದ ಸಮುದ್ರದ ದಂಡೆಯಲ್ಲಿಯೇ ನಡೆದು ತಲುಪಬಹುದಾದ ಇನ್ನೊಂದು ಕೂಗೀ ಬೀಚ್ ವರೆಗೆ ನಮ್ಮಲ್ಲಿ
ಇಬ್ಬರು ಮಾತ್ರ ನಡೆದೇ ಹೋದರು. ಉಳಿದ ಮೂವರು ಅಲ್ಲಿಂದ ಒಂದು ಬಸ್ ಹತ್ತಿದೆವು ಬಾಂಡಿ ಜಂಕ್ಷನ್
ತಲುಪಲು. ಟಿಕೆಟ್ ಇಲ್ಲ....ಸ್ಮಾರ್ಟ್ ಕಾರ್ಡ್ ನಮ್ಮ ಬಳಿ ಇಲ್ಲ. ಚಾಲಕ ದೊಡ್ಡ ಮನಸ್ಸು ಮಾಡಿ
ನಾಕೈದು ನಿಲ್ದಾಣದಾಚೆ ಇದ್ದ ಆ ಸ್ಥಳಕ್ಕೆ ಬಿಟ್ಟಿ ಕರೆದೊಯ್ದ. ಅಲ್ಲಿಂದ ಒಂದು ಟ್ಯಾಕ್ಸಿ
ಹಿಡಿದು ಕೂಗಿ ಬೀಚ್ ತಲುಪಿದೆವು. ಇದು ಕೂಡ ಕ್ಲೀನ್ ಆದರೆ ಜನನಿಬಿಡ. ನಡೆದು ಬರುವವರಿಗಾಗಿ
ಸುಮಾರು ಸಮಯ ಕಾದೆವು. ಒಬ್ಬರ ಬಳಿಯೇ ಅಲ್ಲಿನ ಸಿಮ್ ಇದ್ದದ್ದು...ಅವರು ನಡಿಗೆಯಲ್ಲಿದ್ದರು. ನಾ
ಹೋಗಿ ಒಂದು ಪಬ್ಲಿಕ್ ಬೂತ್ನಿಂದ ಕರೆ ಮಾಡಿ ಅವರು ಬರುತ್ತಿರುವುದನ್ನು confirm ಮಾಡಿಕೊಂಡೆ. ಅಲ್ಲೇ ಒಂದು indian
restaurant ಇತ್ತು.
ಅಲ್ಲಿ ಊಟ ಮುಗಿಸಿ ಕ್ರಿಕೆಟ್ ಪುಣ್ಯಕ್ಷೇತ್ರ SCG ಕಡೆಗೆ
ಹೊರಟೆವು.
ಆದರೆ ಅಲ್ಲಿ ಮಧ್ಯಾನ್ಹದ ಮೇಲೆ ಅನುಮತಿ ಇಲ್ಲದ ವಿಷಯ ತಿಳಿದು ಬೇಸರವಾಯಿತು. ಸರಿ ಮತ್ತೆ ಬುಧವಾರ
ಬರುವ ಪ್ಲಾನ್ ಮಾಡಿ ಅಲ್ಲಿಂದ ನಗರ ವೀಕ್ಷಣೆಯ ಸ್ಥಳವಾದ ಸಿಡ್ನಿ ಟವರ್ ನೋಡಲು ನಿರ್ಧರಿಸಿದೆವು.
ಸರಿಯಾದ ಸಮಯ. ಸೂರ್ಯಾಸ್ತದ ಮೊದಲು ಇನ್ನೂರೈವತ್ತು ಮೀಟರ್ ಮೇಲಿಂದ ನಗರವನ್ನೂ ಸೂರ್ಯಾಸ್ತವನ್ನೂ
ಕಣ್ಣು ತುಂಬಿಕೊಂಡೆವು. ಮತ್ತೊಂದು ದಿನದ ಸವಿ ಅನುಭವಗಳೊಂದಿಗೆ ರೂಮ್ ತಲುಪಿ ತಣ್ಣನೆಯ ರಾತ್ರಿಯ
ಬೆಚ್ಚನೆಯ ನಿದ್ರೆಗೆ ಶರಣಾದೆವು.
ಈ
ದಿನ(18th july) ನಮ್ಮ
ಬ್ಲೂ ಮೌಂಟನ್ ಟ್ರಿಪ್. ಬೆಳಗ್ಗೆ ಬೇಗ ಹೊರಟು ನಮ್ಮ ಚಾಲಕ ಮತ್ತು ಗೈಡ್ ಮ್ಯಾಕ್ಸ್ ಜೊತೆ ರಮಣೀಯ
ಬೆಟ್ಟದ ಕಡೆಗೆ ಹೊರಟೆವು. ಮಾರ್ಗಮಧ್ಯದಲ್ಲಿ ಮೊದಲ ಭೇಟಿ ಫೆದರ್ಡೇಲ್ ವೈಲ್ಡ್ ಲೈಫ್ ಪಾರ್ಕ್ (featherdale
wildlife park). ಇಲ್ಲಿ
ಕೋಲ ಕರಡಿ ಕಾಂಗರೂ ಇವುಗಳಿಗೆ ನಮ್ಮ ಕೈಯಿಂದ ಕಾಳು ತಿನ್ನಿಸಿ ಅವುಗಳ ಒಡನಾಟದ ಅನುಭವ ಪಡೆಯಲು
ಅವಕಾಶವಿತ್ತು. ಅಲ್ಲದೆ ಸುಮಾರು ಪಕ್ಷಿಗಳ ಮತ್ತು ಪೆಂಗ್ವಿನ್ ದರ್ಶನ ಕೂಡ ಆಯಿತು. ಇಲ್ಲಿ
ಹೇಳಲೇಬೇಕಾದದ್ದು ನಮ್ಮ ಗೈಡ್ ದಾರಿಯುದ್ದಕ್ಕೂ ಎಲ್ಲವನ್ನೂ ವಿವರಿಸುತ್ತಿದ್ದದ್ದು. ಅವನಿಗೆ
ತಿಳಿಯದ್ದೇ ಇಲ್ಲವೇನೋ ಎಂಬಂತೆ ಸಸ್ಯಗಳ,ಅವರ ದೇಶದ ಇತಿಹಾಸದ ಹಾಗೂ ಪ್ರಸಕ್ತ ವಿಷಯಗಳ
ಬಗ್ಯೆಯೂ ವಿಶದವಾಗಿ ತಿಳಿಹೇಳುತ್ತಿದ್ದುದು. ಮೋದಿ ಬಯಸುವ ಸ್ವಚ್ಛತೆ ಹೇಗಿರಬೇಕು ಎಂಬುದಂತೂ
ಎಲ್ಲೆಲ್ಲೂ ಗೋಚರವಾಗುತ್ತಿತ್ತು. ಮುಂದೆ ಬೆಟ್ಟದ ಮಾರ್ಗ....ಅಯ್ಯಯ್ಯೋ ಇದು ಬೆಟ್ಟದ ಮಾರ್ಗವಾ
ಎನ್ನುವಂತಿತ್ತು. ವಿಶಾಲ ಜೋಡಿರಸ್ತೆ. ಸುತ್ತಲೂ ಹಸಿರ ರಾಶಿ. ಆಗಾಗ ಕಿಟಕಿಯಾಚೆಯ ದೃಶ್ಯ ಮಾತ್ರ
ನಾವು ಊರೊಳಗಿದ್ದದ್ದಕ್ಕಿಂತ ಎಷ್ಟು ಎತ್ತರ ತಲುಪಿದ್ದೇವೆಂದು ತೋರುತ್ತಿತ್ತು.
ಹನ್ನೆರಡಾಗಿತ್ತು. ಮಧ್ಯೆ ಒಂದು ಸುಸಜ್ಜಿತ ಊರಿನಲ್ಲಿ ಒಂದು ಘಂಟೆಗಳ ಕಾಲ ಊಟಕ್ಕೆಂದು ಗಾಡಿ
ನಿಲ್ಲಿಸಿದರು. ಇಲ್ಲಿ ಮಾತ್ರವೇ ನಮ್ಮ ಸಸ್ಯಾಹಾರಿ ಊಟದ ಕೊರತೆ ಕಂಡದ್ದು ಎನ್ನಬಹುದು. ನಾವು
ಕೊಂಡೊಯ್ದಿದ್ದ ಬ್ರೆಡ್ ಬಿಸ್ಕತ್ ಇದ್ದವಲ್ಲ. ಕಾಫಿ ಅಂತೂ ಸಿಕ್ಕಿತು. ರಸ್ತೆ ಬದಿಯಲ್ಲಿ ಕುಳಿತು
ತಿಂದಿದ್ದಾಯಿತು. ಮುಂದಿನ ಆಕರ್ಷಣೆ ತ್ರೀ ಸಿಸ್ಟರ್ಸ್ ಬಂಡೆಗಳ ದರ್ಶನ. ಅಲ್ಲಿ
ಗಾಡಿಯಿಂದಿಳಿಯುತ್ತಿದ್ದಂತೆ ಅದೆಂತಹ ಗಾಳಿ. ಟೋಪಿ ಇರಲಿ ನಾವೇ ಹಾರಿ ಹೋಗುತ್ತೇವೋ ಎನ್ನುವಷ್ಟು.
ನಯನ ಮನೋಹರ ದೃಶ್ಯಗಳಿಗೆ ಮಾರು ಹೋಗಿ ಅದೆಷ್ಟು ಸಮಯ ಕಳೆದೆವೋ. ಮತ್ತೆ ಬಸ್ ಹತ್ತಿ ತುಸು
ದೂರದಲ್ಲೇ ಇದ್ದ ಅಲ್ಲಿನ ಪ್ರಮುಖ ಆಕರ್ಷಣೆ ಆದ ಸ್ಕೈ ರೋಪ್, ಕೇಬಲೆ ಕಾರ್ ಮತ್ತು ಟ್ರೈನ್ ಮೂರೂ ವಿಧದಲ್ಲಿ
ಮೇಲೆ ಕೆಳಗೆ( ಸುಮಾರು ಎರಡು ಕಿ.ಮೀ) ಎಷ್ಟು ಬಾರಿಯಾದರೂ ಓಡಾದುವ ಅವಕಾಶ. ಈ ಮಾರ್ಗದಲ್ಲಿ
ಕಣಿವೆಮೇಲೆ ಹೋಗುತ್ತಾ ಅಲ್ಲಿಂದ ತ್ರೀ ಸಿಸ್ಟರ್ಸ್ ಬಂಡೆಗಳು ಹಾಗೂ ಒಂದು ಸಣ್ಣ ಜಲಪಾತ ನೋಡುವ
ಮಜ. ಸಮಯದ ಮಿತಿಯಲ್ಲಿ ಎರಡೆರಡು ಬಾರಿ ಎಲ್ಲ ರೀತಿಯ ಅನುಭವಕ್ಕೆ ಶರಣಾದೆವು. ಚಾಲಕ ನಮ್ಮನ್ನು
ಹುಡುಕಿಕೊಂಡು ಬರುವಷ್ಟು ತಡ ಕೂಡ ಮಾಡಿದ್ದೆವು. ನಂತರ ಸಂಜೆ ಕತ್ತಲಾಗುತ್ತಿದ್ದಂತೆ ಹಿಂತಿರುಗಿ
ಬಂದಾಗ ಸಿಡ್ನಿಯಲ್ಲಿ ಒಂದು ಕ್ರೂಯಿಸ್ ಬಳಿ ನಮ್ಮನ್ನಿಳಿಸಿದ ಮ್ಯಾಕ್ಸ್ನೊಂಂದಿಗೆ ಒಂದು ಸೆಲ್ಫಿ
ತೊಗೊಂಡು ಧನ್ಯತೆಯನ್ನು ಪಡೆದವು. ೪೫ ನಿಮಿಷಗಳ ಕ್ರೂಯಿಸ್ ಯಾನ ಒಂದು ಸಂತಸದ ದಿನಕ್ಕೆ
ಪರ್ಫೆಕ್ಟ್ ಅಂತ್ಯ ಹಾಡಿತು. ಊಟ ಮುಗಿಸಿ ರೂಮು ಸೇರಿದೆವು.
19
ಜುಲೈ ಬೆಳಗ್ಗೆ ಹಾಪ್ ಆನ್ ಬಸ್ಸಿನಲ್ಲಿ ಸಿಡ್ನಿ ಕ್ರಿಕೆಟ್ ಗ್ರೌಂಡ್ ನೋಡಲು ಹೊರಟೆವು. ಐದರಲ್ಲಿ
ಇಬ್ಬರೇ ಆಸಕ್ತಿ ತೋರಿಸಿದ್ದರಿಂದ ಉಳಿದ ಮೂವರು ಚೈನಾಟೌನ್ ಶಾಪಿಂಗ್ ಹೋದರು. ನಾನು ನನ್ನ ನಾದಿನಿ
ಇಬ್ಬರೂ ಹತ್ತು ಗಂಟೆಯ SCG ಟೂರ್ ಹೋದೆವು. ತರಬೇತಿ ಸೌಲಭ್ಯಗಳು, ಡ್ರೆಸಿಂಗ್ ರೂಮ್, ಪ್ರೆಸ್ ಮೀಟ್ ಜಾಗ ಕಾಮೆಂಟೇಟರ್ಸ್
ಬಾಕ್ಸ್ ಹಾಗೂ ಆಟಗಾರರು ಕುಳಿತುಕೊಳ್ಳುವ
ಜಾಗವೆಲ್ಲಾ ಅಡ್ಡಾಡಿ ಮೈದಾನಕ್ಕೆ ಒಮ್ಮೆ ಇಳಿದು ಬೌಂಡರಿಯಿಂದ ತುಸು ಒಳಗೆ ಕಾಲಿಟ್ಟು ನಾವೇ
ಆಡಿದಂತೆ ಪುನೀತರಾದೆವು. ಕ್ರಿಕೆಟ್ ಸೀಸನ್ ಅಲ್ಲದ್ದರಿಂದ ಅಲ್ಲಿ ರಗ್ಬಿ ಆಡುವ ವ್ಯವಸ್ಥೆಗಳು
ಆಗಿದ್ದವು. ನಮಗೆ ಗಂಧ ಇಲ್ಲದ ಆ ಆಟಗಾರನೊಬ್ಬ ಎದುರು ಬಂದಾಗ ಅವನೊಡನೆ ಒಂದು ಸೆಲ್ಫಿ ಬೇರೆ.
ಹನ್ನೆರಡು ಗಂಟೆಯ ವೇಳೆಗೆ ಉಳಿದ ಮೂವರೂ ಅಲ್ಲಿ ಬಂದಿದ್ದರು. ಎಲ್ಲರೂ ಊಟಕ್ಕೆ ಅಲ್ಲಿನ
ನಿವಾಸಿಯಾದ ನನ್ನ ಅಣ್ಣನ ಮಗಳ ಆಮಂತ್ರಣದ ಮೇಲೆ ನಮ್ಮ ಹೋಟೆಲ್ ಬಳಿಯೇ ಇದ್ದ ಮಸಾಲಾ ಬೌಲ್ ಎಂಬ
ಇಂಡಿಯನ್ ರೆಸ್ಟೊರೆಂಟ್ನ ಲ್ಲಿ ಊಟ ಮಾಡಿದೆವು. ಊಟ ಕೊಡಿಸಿದ್ದಲ್ಲದೆ ನಮಗೊಂದು ಮತ್ತೆ
ಭಾರತದಲ್ಲಿದ್ದ ನಮ್ಮ ಮಕ್ಕಳಿಗೆ ಒಂದು ಚಾಕಲೇಟ್ ಪ್ಯಾಕೆಟ್ ಕೊಟ್ಟು ನಮ್ಮೊಂದಿಗೆ ಕಳೆದ ಸ್ವಲ್ಪ
ಸಮಯದಲ್ಲೇ ತಮ್ಮ ಪ್ರೀತಿ ವಿಶ್ವಾಸದ ಪರಿಚಯ ಮಾಡಿದರು. ಆ ಮಗಳ ಗಂಡ ಅಲ್ಲಿ ನಡೆವ ದೂರದಲ್ಲೇ ಇದ್ದ
ಸರಕಾರಿ ಕಛೇರಿಯಲ್ಲಿ ಕೆಲಸ ಮಾಡುತ್ತಿದ್ದುದರಿಂದ ಅವ್ರು ಕೂಡ ನಮ್ಮೊಡನೆ ಸ್ವಲ್ಪ ಸಮಯ ಕಳೆದರು.
ನಂತರ ಅವರಿಗೆ ವಿದಾಯ ಹೇಳಿ ರೂಮು ತಲುಪಿದೆವು. ಸಂಜೆಗೆ ಇತರರು ಬೇರೆ ಕಡೆ ನೋಡಿದ್ದರಿಂದ ನಾನು
ನನ್ನವಳು ಮೇಡಮ್ ಟುಸ್ಸಾಡ್ಸ್ ಮಳಿಗೆ ನೋಡಿ ಬಂದೆವು. ಅಲ್ಲಿ ಗಾಂಧಿ ಮಂಡೆಲ ಪೋಪ್ ಸಚಿನ್ ವಾರ್ನ್
ಮೆಗ್ರಾ ಒಬಾಮಾ ಜಾಕಿ ಚಾನ್ ಲೆನಾರ್ಡ್ ಡಿ ಕಾಪ್ರೋ ಎಲ್ಲರೊಡನೆ ಫೋಟೊ ಸೆಶನ್ ಆಯ್ತು. ಕೆಲ
ಸೆಕ್ಸಿ ನಟಿಯರೊಡನೆಯೂ. ಊಟ ಮುಗಿಸಿ ರೂಮು ತಲುಪಿ ಸಿಡ್ನಿಯಲ್ಲಿನ ಕೊನೆಯ ನಿದ್ರೆ ಹೊಡೆದವು.
21ರ
ಬೆಳಗ್ಗೆ ಇದ್ದ ಅವಲಕ್ಕಿ ಬಿಸಿ ಮಾಡಿ ಉಪಹಾರದ ಕಥೆ ಮುಗಿಸಿ ಸಿಡ್ನಿಯ ನಮ್ಮ ಹೊಟೆಲ್ಗೆ್ ವಿದಾಯ
ಹೇಳಿ ಮೆಲ್ಬೋರ್ನ್ ವಿಮಾನ ಹಿಡಿಯಲು ಏರ್ಪೋ ರ್ಟ್ ತೆರಳಿದೆವು. ಲಗೇಜೆಗೆ 23 ಕೆಜಿಯ ಮಿತಿ
ಇತ್ತು. ವಿಮನನಿಲ್ದಾಣದಲ್ಲೆ ಇದ್ದ ಮೆಷಿನ್ನ್ಲ್ಲಿ ತೂಗಿದರೆ ಎರಡು ಲಗೇಜ್ ಸ್ವಲ್ಪ ಮಿತಿ
ದಾಟಿದ್ದವು ಮತ್ತು ಒಂದು ಸುಮಾರು ಕಡಿಮೆ ಇತ್ತು. ಚರ್ಚೆ ಮಾಡಿ ಎಲ್ಲ ಒಟ್ಟಿಗೆ ಲೆಕ್ಕ
ಹಾಕಬಹುದೆಂದುಕೊಂಡು ಚೆಕ್ ಇನ್ ನಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿದೆವು. ಖಡಾಖಂಡಿತವಾಗಿ
ಹೆಚ್ಚಿನದಕ್ಕೆ ಅಡ್ಡಿ ಮಾಡಿದಾಗ ಅಲ್ಲಿಯೇ ಒಂದರಿಂದ ಒಂದಕ್ಕೆ ಕೆಲವು ಐಟಮ್ ವರ್ಗಾಯಿಸಿ ಮಿತಿಗೆ
ತಂದೆವು. ಬೇಗನೆ ಹೋಗಿದ್ದರಿಂದ ಬೇರೆ ಜನ ಅಷ್ಟಿರಲಿಲ್ಲ. ಆಟೋಮ್ಯಾಟಿಕ್ ಪಾಸ್ಪೋರ್ಟ್
ವೆರಿಫಿಕೇಷನ್ ನಮಗೆ ಹೊಸದಾಗಿತ್ತು. ಸುಮಾರು ಒಂದೂವರೆ ಗಂಟೆಗಳ ಪ್ರಯಾಣ. ಮೆಲ್ಬೋರ್ನ್ನಲ್ಲಿ
ಸಣ್ಣಗೆ ಮಳೆ ಬೇರೆ. ಮೊದಲೇ ಬುಕ್ ಆಗಿದ್ದ ಮ್ಯಾಕ್ಸಿಕ್ಯಾಬ್ ಬಂದಿತ್ತು. ಅಲ್ಲಿಂದ ಸುಮಾರು
ಅರವತ್ತೈದು ಕಿ,ಮೀ
ದೂರದ ಕೈನಟೊನ್ ರೆಸಾರ್ಟ್ನೊಲ್ಲಿ ನಮ್ಮ ವಸತಿ. ದೂರದ ಸ್ಥಳ ತಲುಪಲು ತಡವಾಗುತ್ತದೆಂದು
ದಾರಿಯಲ್ಲಿ ಒಂದು ಸಬ್ವೇ ನಲ್ಲಿ ಸ್ವಲ್ಪ ಪ್ಯಕ್
ಮಾಡಿಕೊಂಡು ಕಾರಿನಲ್ಲೇ ತಿಂದು ಮುಗಿಸಿದೆವು. ಸುಂದರ ರಸ್ತೆಗಳು ಸುತ್ತ ಹಸಿರು.... ನಮ್ಮ
ಕಾಟೇಜ್ ತಲುಪಿದೆವು. ರಿಲಾಕ್ಸ್ ಮಾಡಿ ಸಂಜೆ ಕೈನಟೋನ್ ಮಾರ್ಕೆಟ್ ಜಾಗಕ್ಕೆ (ಸುಮಾರು ನಾಲ್ಕೈದು
ಕಿಮೀ) ಹೋಗಿ ಬರಲು ಉಚಿತ ವಾಹನ ವ್ಯ್ವವಸ್ಥೆ ಇದ್ದುದರಿಂದ ಅಂದು ಅಷ್ಟಕ್ಕೇ ತೃಪ್ತರಾದೆವು. ಹೋಗಿ
ಸ್ವಲ್ಪ ಅಕ್ಕಿ ತರಕಾರಿ ಹಣ್ಣು ಎಲ್ಲಾ ತುಂಬಿಕೊಂಡು ಬಂದಿದ್ದುದು ಒಳ್ಳೆಯದೇ ಆಯಿತು. ರಾತ್ರಿಗೆ
ಸ್ವಲ್ಪ ಉಪ್ಪಿಟ್ಟು ಮತ್ತು ಮೊಸರನ್ನ ರೆಡಿ ಆಯಿತು. ಬೆಚ್ಚಗಿನ ಕೊಟಡಿಗಳು ನೆಮ್ಮದಿಯಿಂದ
ನಿದ್ರಿಸಲು ಅನುವು ಮಾಡಿದವು.
22ನೇ
ತಾರೀಕು ನಮ್ಮ ಬುಶಃಲ್ಯಾಂಡ್ ರೆಸಾರ್ಟ್ ಕಾಟೇಜನಿಲ್ಲಿಯೇ ತಿಂಡಿ ಮಾಡಿ ತಿಂದು ಒಳಾಂಗಣ
ಕ್ರೀಡೆಗಳಾದ ಟೇಬಲ್ ಟೆನ್ನಿಸ್ ಬಿಲ್ಲಿಯರ್ಡ್ಸ ಹಾಗೂ ಫೂಸ್ಬಾ ಲ್ ಎಲ್ಲದರಲ್ಲೂ ನಮ್ಮ ಪರಿಣತಿ(?) ಮೆರೆದೆವು. ಕಾಟೇಚ್ ತೆರಳಿ ಅಡಿಗೆ ಮಾಡಿ
ತಿಂದು ಮಧ್ಯಾನ್ಹ ಮೊದಲೇ ನಿರ್ಧರಿಸಿದಂತೆ ಕೈನಟೋನ್ ದರ್ಶನಕ್ಕೆ ತೆರಳಿದೆವು. ಎಪ್ಪತ್ತರ ಹರೆಯದ
ಮಹಿಳೆ ನಮಗೆ ಗೈಡ್ ಆಗಿ ಬಂದು ಅಲ್ಲಿನ ಪ್ರೇಕ್ಷಣೀಯ ಪ್ರಾಚೀನ ಕಟ್ಟಡಗಳನ್ನು ತೋರಿಸುತ್ತಾ ಅವುಗಳ
ಬಗ್ಯೆ ಅಪಾರ ಮಾಹಿತಿ ಕೊಡುತ್ತಾ ಊರೆಲ್ಲಾ ಸುತ್ತಿಸಿ ಅಲ್ಲಿ ಪ್ರಖ್ಯಾತವೆಂದು ಬಣ್ಣಿಸಿ ಚಿಲುಮೆ
ನೀರಿನ ತಾಣಕ್ಕೆ ಕರೆದೊಯ್ದಳು. ನದಿ ಎಂದು ತೋರಿದ್ದು ಒಂದು ಸಣ್ಣ ಕಾಲುವೆಯಂತಿದ್ದಿತು. ಚಿಲುಮೆಯ
ನೀರು ಬಾಯಲ್ಲಿಡುವಂತಿರಲಿಲ್ಲ. ಕಟ್ಟಡಗಳಂತೂ ಒಂದಕ್ಕಿಂತ ಒಂದು ವಿಶೇಷ ವಿನ್ಯಾಸಗಳಿಂದ ಮನ
ಸೆಳೆದವು. ಮುಖ್ಯವೆಂದರೆ ಇವೆಲ್ಲ ಬಹಳ ಹಿಂದೆ ಲಾವಾರಸ ಘನವಾಗಿದ್ದುದರ ಇಟ್ಟಿಗೆಗಳಿಂದ
ಕಟ್ಟಿದ್ದವು. ಈ ನಗರದಲ್ಲಿ ಸುಮಾರು ಇಂತಹವುಗಳು ಇವೆ. ರಸ್ತೆಗೆ ಕೂಡ ಉಪಯೋಗಿಸಿದ್ದಾರೆ. ನಿಯಮಿತ
ಸಮಯಕ್ಕೆ ಮತ್ತೆ ನಮ್ಮನ್ನು ಬೀಳ್ಕೊಟ್ಟ ಆ ವೃದ್ಧೆಯ ಹೆಸರು ಬೆಟ್ಟಿ. ಮನೆ ತಲುಪುವ ಮುನ್ನ
ಸ್ವಲ್ಪ ಷಾಪಿಂಗ್ ಮುಗಿಸಿ ಕಟೇಜ್ ಹಿಂತಿರುಗಿದೆವು. ಮನೆಯ ಊಟ ಉಳಿದದ್ದು ಉಡೀಸ್. ಬೆಚ್ಚಗೆ ಮಲಗಿ
ಗಡದ್ದಾಗಿ ನಿದ್ರಿಸಿದೆವು.
23
ಜುಲೈ...ಭಾನುವಾರ. ತಾಪಮಾನ ಬೆಳ್ಬೆ ಳಗ್ಯೆ 1ಡಿಗ್ರಿ. ಕಾಟೇಜ್ನಿಂದ ಹೊರಗೆ ಬಂದರೆ ಕೊರೆವ ಚಳಿ.
ಯಾತಕ್ಕೂ ಒಂದು ಸೆಲ್ಫಿ ಅವಶ್ಯ ಅನ್ನಿಸಿತು. ತೊಗೊಂಡೆ(ಬನಿಯನ್ನ ಲ್ಲಿದ್ದೆ). ಸ್ವಲ್ಪ ಸಮಯ ಕಳೆದ
ಮೇಲೆ ಒಂದು ವಾಕ್ ಹೋಗಿ ಅಲ್ಲಿದ್ದ ಈಜುಕೊಳ ಮತ್ತು ಅದರಾಚೆಯಿದ್ದ ಒಂದು ಸುಂದರ ಕೆರೆ ನೋಡಿ
ಬಂದೆ. ಕಾಟೇಜ್ ಸುತ್ತಮುತ್ತಲೇ ಕಾಂಗರೂಗಳ ಹಿಂಡು ಹಾಗೂ ಕೆಲ ಸುಂದರ ಪಕ್ಷಿಗಳನ್ನೂ ಕಂಡೆವು.
ಉಪಾಹಾರ ಮುಗಿಸಿ ಒಳಾಂಗಣ ಕ್ರೀಡೆಯ ಬದಲು ದೊಡ್ಡ ಟೆನಿಸ್ ಮೈದಾನದತ್ತ ಹೆಜ್ಜೆ ಹಾಕಿದೆವು. ಅದು
ಬೇಡವೆನಿಸಿದ ಇಬ್ಬರು ಟೇಬಲ್ ಟೆನಿಸ್ ಆಡಲು ಹೋದರು. ಸುಮಾರು ಪ್ರಯತ್ನಗಳ ನಂತರವೇ ನೆಟ್ ಆಚೆಗೆ
ಸರಿಯಾಗಿ ಸರ್ವ್ ಮಾಡಲು ಸಾಧ್ಯವಾದುದು. ಆದರೂ ಅನುಭವ ಚೆನ್ನಾಗಿತ್ತು. ಕಾಟೇಜ್ ಸೇರಿ ಮನೆ ಊಟ
ಮಾಡಿ ಮಳೆ ಬರುವಂತಾದುದರಿಂದ ಕ್ಲಬ್ ನಿಂದ ತಂದಿದ್ದ ಮೂರು ಪ್ಯಾಕ್ ಇಸ್ಪೀಟ್ ಎಲೆಗಳು ಉಪಯೋಗಕ್ಕೆ
ಬಂದವು. ಸುಮರು ಹೊತ್ತು ರಮ್ಮಿ ಆಡಿ ಕಾಲ ಕಳೆದೆವು. ಮಾರನೆಯದಿನ ಸಿಟಿ ಹೋಗುವ ಕಾರ್ಯಕ್ರಮ
ಇದ್ದುದರಿಂದ ಸ್ವಲ್ಪ ಬೇಗನೆ ಹಾಸಿಗೆ ಸೇರಿದೆವು.
24ಜುಲೈ...ಇಂದು
ಈ ಬುಷ್ಲ್ಯಾಂಡ್ ರೆಸಾರ್ಟ್ಗೆ ಬೈ ಹೇಳಲು ನಿರ್ಧರಿಸಿದ್ದೆವು. ಮೆಲ್ಬೋರ್ನ್ ಸುತ್ತಲು ಇಲ್ಲಿಂದ
ಅಲ್ಲಿಗೆ ಇರುವ ಸುಮರು ಅರವತ್ತೈದು ಕಿಮೀ ವ್ಯರ್ಥ ಪ್ರಯಾಣ ತಪ್ಪಿಸಲೋಸುಗ ಈ ತೀರ್ಮಾನ. ಹಿಂದಿನ
ದಿನವೇ ಕೇಳಿ ತಿಳಿದಿದ್ದೆವು ಅಲ್ಲಿಂದ ಸಿಬಿಡಿಗೆ ಟ್ರೈನ್ ಅನುಕೂಲದ ಬಗ್ಯೆ. ಲಗೇಜ್ ಸಾಗಿಸಲೂ
ಯಾವ ತೊಂದರೆ ಇಲ್ಲ ಎಂದು ಅರಿತಿದ್ದೆವು. ಸ್ಮಾರ್ಟ್ ಕಾರ್ಡ್ ಇತ್ತು. ಸಮಯಕ್ಕೆ ಮೊದಲೇ ನಿಲ್ದಾಣ
ತಲುಪಿ ಬೇಕಿದ್ದಷ್ಟು ರೆಚಾರ್ಜ್ ಮಾಡಿಕೊಂಡೆವು. ಒಂಭತ್ತಕ್ಕೆ ಮೊದಲಿದ್ದ ರೈಲಿನಲ್ಲಿ ಸಾಮಾನ್ಯ
ಪ್ರಯಾಣಿಕರಿಗೆ ಅವಕಾಶವಿರಲಿಲ್ಲ. ನೌಕರಿಯ ಆತುರದಲ್ಲಿರುವವರಿಗೇ ವಿಶೇಷ ಅದು. ನಂತರದ ರೈಲಿನಲ್ಲಿ
ರಮಣೀಯ ಪರಿಸರ ನೋಡೂತ್ತಾ ಮೆಲ್ಬೊರ್ನ್ ಊರಲ್ಲಿದ್ದ ನಮ್ಮ ಹೊಟೆಲ್ ಐಬಿಸ್ ತಲುಪಿದೆವು.
ನಿಲ್ದಾಣದಿಂದ ಸುಮಾರು ಮುಕ್ಕಾಲು ಕಿಮೀ ದೂರ ಇದ್ದ ಆ ಹೊಟೆಲ್ ತಲುಪಲು ನಡೆದೇ ನಮ್ಮ ಲಗೇಜ್
ತಳ್ಳಿಕೊಂಡು ಹೋಗಿ ಸೇರಿದೆವು. ಪಾದಚಾರಿಗಳು ನಡೆವ ದಾರಿ ಕೂಡ ಎಷ್ಟು ಸಮ..ಎಷ್ಟು
ಸ್ವಚ್ಛ...ಎಷ್ಟು ಅನುಕೂಲ. ಹೊಟೆಲ್ ನೆಲದಿಂದ ಹತ್ತು ಮೆಟ್ಟಿಲು ಮೇಲೆ ಇದ್ದು ಅಲ್ಲಿಗೆ ಲಗೇಜ್
ಹತ್ತಿಸಲು ಇಲ್ಲಿನಂತೆ ಅಲ್ಲಿ ಯಾರೂ ರೂಮ್ ಬಾಯ್ ಇಲ್ಲ್ದದಿದ್ದುದು ಸ್ವಲ್ಪ ತ್ರಾಸವೇ ಆಯಿತು.
ನಂತರ ತಿಳಿದುಬಂದದ್ದು ಅಲ್ಲಿ ಸ್ವಲ್ಪ್ ರಿನೋವೇಶನ್ ನಡೆಯುತ್ತಿದೆ ಎಂಬುದು. ಅಷ್ಟರಲ್ಲಿ ನಮ್ಮ
ಕಣ್ಣಿಗೆ ಬಿದ್ದದ್ದು ಅದರ ಪಕ್ಕದ ಕಟ್ಟದದ ಮುಂದಿದ್ದ 'ಶರವಣ ಭವನ್' ಫಲಕ. ಇನ್ನೇನು ಬೇಕು.ರೂಮ್ ಕೊಡಲು ಇನ್ನೂ
ಸಮಯವಿತ್ತು.ಲೆಫ್ಟ್ ಲಗೇಜ್ ರೂಮಿಗೆ ತಳ್ಳಿ ಅಲ್ಲಿನ ವಿಶೇಷತೆಯಾದ ಉಚಿತ ಟ್ರಾಮ್ ಸರ್ವಿಸ್ ಉಪಯೋಗ
ಪಡೆದು ಒಂದು ಸುತ್ತು ಹಾಕಿ ಬಂದೆವು. ನಂತರ ಪಕ್ಕದ ನಮ್ಮ ಹೊಟೆಲ್ನಲ್ಲಿ ಊಟ ಮುಗಿಸಿ ಸ್ಕೈಡೆಕ್
ಪಾಯಿಂಟ್ ಅಂದರೆ ವ್ಯೂ ಪಾಯಿಂಟ್ ಇಡೀ ನಗರ ವೀಕ್ಷಣೆ ೨೬೫ ಮೀಟರ್ ಎತ್ತರದಿಂದ.....ಸೂರ್ಯಾಸ್ತದ
ಮೊದಲು ತಲುಪಿ ಅಲ್ಲಿಂದ ಸೂರ್ಯಾಸ್ತ ನೋಡಿ ಸಂತುಷ್ಟರಾದೆವು. ಇಲ್ಲಿ ನಗರದ ಮಧ್ಯಭಾಗದ ಸುಮಾರು
ಸ್ಥಳಗಳು ಉಚಿತ ಟ್ರಾಮ್ ಸಂಪರ್ಕದಲ್ಲಿರುವುದು ನಮ್ಮಂತಹ ಪ್ರವಾಸಿಗರಿಗೆ ಬಲು ಉಪಯೋಗ. ಮೇಲಿಂದ
ಇಳಿದು ಬಂದು ಕತ್ತಲಲ್ಲಿ ಎತ್ತ ಸಾಗುವುದು ಸ್ವಲ್ಪ confuse. ಅಷ್ಟರಲ್ಲಿ ಅಲ್ಲಿ ಭಾರತೀಯರಂತೆ ಕಂಡವರು ಬಳಿ
ಹೋದರೆ....ಒಬ್ಬ ನಮ್ಮ ಹೊಟೆಲ್ ರಿಸೆಪ್ಶನ್ ಅಸಿಸ್ಟೆಂಟ್. ಅವರು ನಮಗೆ ಮಾರ್ಗದರ್ಶನ ಮಾಡಿದರು.
ಮತ್ತೆ ಶರವಣ ಭವನದ್ಲ್ಲಿ ಉಂಡು ನಮ್ಮ ನಮ್ಮ ಕೋಣೆ ತಲುಪಿ......ನಿದ್ರಿಸಿದೆವು.
25
ಜುಲೈ....ಇಂದು ಗ್ರೇಟ್ ಓಷನ್ ಡ್ರೈವ್ ಟೂರ್ ಕಾದಿರಿಸಿತ್ತು. ಹೋಟೆಲ್ ಬಳಿಯಿಂದ ನಮ್ಮನ್ನು ಒಂದು
ಮಿನಿಬಸ್ನನಲ್ಲಿ ಕರೆದೊಯ್ದು ಪ್ರವಾಸಕೇಂದ್ರದ ಬಳಿ ಇನ್ನೊಂದು ಹಿತವಾದ ಮಿನಿಬಸ್ಗೆಾ
ವರ್ಗಾಯಿಸಿದರು. ಶರವಣ ಭವನ್ ಯಿಂದ ಹಿಂದಿನ ದಿನವೇ ಹೇಳಿ ಚಪಾತಿ ಜೊತೆಗೆ ಗೊಜ್ಜು ಪ್ಯಾಕ್
ಮಾಡಿಸಿದ್ದೆವು. ದಾರಿಯಲ್ಲಿ ಎಲ್ಲವನ್ನೂ ಅದ್ಭುತವಾಗಿ ವಿವರಿಸುತ್ತಾ ತಮ್ಮ ದೇಶದ ಇತಿಹಾಸ
ರಾಜಕೀಯ ಸಾಮಾಜಿಕ ವ್ಯಾವಹಾರಿಕ ಎಲ್ಲ ವಿವರಗಳನ್ನು ಲೀಲಾಜಾಲವಾಗಿ ಹೇಳುತ್ತಾ ನಮ್ಮನ್ನು ಪೀಟರ್
ರಂಜಿಸಿದ. 12 apostles ಅಲ್ಲಿ ಸಮುದ್ರದಲ್ಲಿನ ಆಕರ್ಷಣೆ. ಅದನ್ನು
ತಲುಪಲು ಸುಮಾರು 350 ಕಿ ಮೀಗಳ ಪ್ರಯಾಣ. ದಾರಿಯುದ್ದಕ್ಕೂ ನಮ್ಮ ಎಡಪಕ್ಕದಲ್ಲಿಯೇ ಸಮುದ್ರ. ಆಗಾಗ
ಸ್ವಲ್ಪ ಮರೆಯಾಗುತ್ತಾ ಮತ್ತೆ ಕಾಣಿಸಿಕೊಳ್ಳುತ್ತಾ ಖುಷಿ ಕೊಟ್ಟಿತು. ಮೊದಲು ಊಟಕ್ಕೆ ಒಂದು ಧಾಬಾ
ರೀತಿಯ ರೆಸ್ಟೊರೆಂಟ್ ಬಳಿ ನಿಲ್ಲಿಸಿದ. ಅಲ್ಲಿ ನಮ್ಮ ಪ್ಯಾಕೆಟ್ ತಿಂಡಿ ತಿನ್ನುವುದಕ್ಕೆ ಸ್ವಲ್ಪ
ವಿರೋಧಿಸಿದರು. ಯಾತಕ್ಕೂ ಕಾಫಿ ಅಂತೂ ಅಲ್ಲಿ ಕುಡಿಯುತ್ತಿದ್ದೆವಲ್ಲ......ಅದ್ಜಸ್ಟ್ ಆಯಿತು.
ಅಲ್ಲಿಂದ ಮುಂದೆ ಒಂದೆರಡು ಕಡೆ ನಮಗೆ ಇಳಿದು ಸಮುದ್ರದ ಬಳಿ ಹೋಗಲು ಅನುವು ಮಾಡಿಕೊಡುತ್ತಿದ್ದ.
ಅವನಿಗೂ ಒಂದೇ ಸಮನೆ ಓಡಿಸುವುದು (ಗಾಡಿ ರಸ್ತೆ ಎರದೂ ಚೆನ್ನೆದ್ದರೂ) ಕಷ್ಟ ತಾನೆ.ಒಂದು ಕಡೆ
ಮುಕ್ತವಾಗಿ ಕೋಲಾ ಕರಡಿ ಇರುತ್ತದೆಂದು ನಿಲ್ಲಿಸಿದ. ಅಲ್ಲಿ ಮರದಲ್ಲಿ ನಿದ್ರಿಸುತ್ತಿದ್ದ ಕೆಲವು
ಕರಡಿಗಳನ್ನುನೋಡಿದುದು ಒಂದಾದರೆ..ನಾವು ಇಳಿಯುತ್ತಿದ್ದಂತೆ ಎಲ್ಲರ ಮೇಲೆ ಹಾರಿ ಬಂದು ಕುಳಿತ
ಗಿಳಿಗಳ ದಂಡು ಒಂದು ಹೊಸ ವಿಚಿತ್ರ ಅನುಭವ ಕೊಟ್ಟಿತು. ಒಂದು ಲೈಟ್ಹೌಳಸ್ ಬಳಿ ಕೂಡ ಇಳಿಸಿದ್ದ.
ಕೊನೆಗೂ ನಮ್ಮ ಗುರಿಯ ತಾಣ ಬಂದಿತು. ಹೋಗಿ ಫೋಟೋ ತೆಗೆಯುತ್ತಿದ್ದಂತೆ ಮಳೆಯ ಆಗಮನ.ಹೆಸರಿಗೆ ೧೨
ಆದರೂ ಅಲ್ಲಿ ಒಟ್ಟಾಗಿ ಇದ್ದದ್ದು ಮೂರು ಅಪೋಸಲ್ಗರಳು ಮಾತ್ರ.ಸೂರ್ಯಾಸ್ತದ ಝಲಕ್. ಮತ್ತೆ ಮಳೆ.
ಅರ್ಧ ಕಿ.ಮೀ ಯಾವುದೇ ಮರೆಯಿಲ್ಲದ್ದರಿಂದ ಸಣ್ಣಗೆ ನೆನೆಯುತ್ತಲೇ ಹಿಂತಿರುಗಿದೆವು. ಮತ್ತೆ
ಮುನ್ನೂರು ಕಿಮೀ ಗಾಡಿ ಓಡಿಸಬೇಕಿತ್ತಲ್ಲ ಅವ. ಮೆಲ್ಬೋರ್ನ್ ಹಿಂದಿರುಗುವಾಗ ಸುಮಾರು ಸಮಯವೇ
ಆಗಿತ್ತು. ಸ್ವಲ್ಪ ಲೈಟಾಗಿ ಶರವಣ ಭವನ್ನೇಲ್ಲಿ ತಿಂದು ರೂಮಿಗೆ ಹೋಗಿ ಅಡ್ಡಾದೆವು.
26
ಜುಲೈ ಉಪಹಾರ ಮುಗಿಸಿ ಉಚಿತ ಟ್ರಾಮ್ನೆಲ್ಲಿ ಪಾರ್ಲಿಮೆಂಟ್ ಭವನದ ದರ್ಶನಕ್ಕೆ ಹೋದೆವು. ಆದರೆ
ಉಚಿತ ಸೇವೆಯ ದಾರಿಯಿಂದ ಸ್ವಲ್ಪ ದೂರವೇ ಇದ್ದಿತು. ಒಂದು ಸುಂದರ ಉದ್ಯಾನದೊಳಗಿಂದ ಹೋಗಿ
ಸೇರಿದರೆ....ಆ ತಕ್ಷಣದ ಬ್ಯಾಚ್ ವಿದ್ಯಾರ್ಥಿಗಳಿಗಾಗಿ ಎಂದು ನಮ್ಮನ್ನು ಮಧ್ಯಾನ್ಹ ಎರಡು ಗಂಟೆಗೆ
ಅಲ್ಲಿ ಬರಲು ಹೇಳಿದರು. ಸರಿ ಮತ್ತೆ ಉಚಿತ ಟ್ರಾಮ್ನವಲ್ಲಿ ಕುಳಿತು ಮುಂದಿನ ನಿಲ್ದಾಣಗಳಿಗೆಲ್ಲಾ
ಸುತ್ತಿ ಬಂದೆವು. ಅಲ್ಲೊಂದು ಇಂಡಿಯನ್ ರೆಸ್ಟೋರೆಂಟ್ ಕಂಡಿತು. ಅಲ್ಲಿ ಸ್ವಲ್ಪ ಹೊಟ್ಟೆಪೂಜೆ
ಮುಗಿಸಿ ಮತ್ತೆ ಎರಡು ಗಂಟೆಯ ಸುಮಾರಿಗೆ ಪಾರ್ಲಿಮೆಂಟ್ ಬಳಿಗೆ ಬಂದರೆ...ಸ್ವಲ್ಪ ಗಡಸಾಗಿಯೇ ದೂರ
ಕುಳಿತು ಕಾಯಲು ಹೇಳಿದರು. ಮೂರು ಗಂಟೆಗೇ ಮುಂದಿನ ಶೋ. ನಿಧಾನವಾಗಿ ಜನ ಸೇರಲಾರಂಭಿಸಿದರು. ಅಂದ
ಹಾಗೆ ಇಲ್ಲಿ ಒಂದು ತಮಾಷೆ ನಡೆಯಿತು. ಅಲ್ಲಿಗೆ ಬರಲು ಅಲ್ಲಿ ಬಂದ ಟ್ರಾಮ್ ನಾನು ಹತ್ತಿದೆ
ಉಳಿದವರು ಹತ್ತಲಿಲ್ಲ. ಸರಿ ಅವರಿಗೆ ಗೊತ್ತಿದೆಯಲ್ಲ ಎಂದು ಅಲ್ಲಿ ಮೆಟ್ಟಿಲ ಮೇಲೆ ಕುಳಿತಿದ್ದೆ.
ಸ್ವಲ್ಪ ಸಮಯದ ನಂತರ ಅವರು ಅಷ್ಟು ದೂರದಲ್ಲಿ ಕಂಡಾಗ ಎದ್ದು ಕೈ ಬೀಸಿದೆ. ಎರಡು ನಿಮಿಷದಲ್ಲಿ
ಇಬ್ಬರು ಬಂದೂಕು ಹಿಡಿದ ಪೋಲೀಸರು ನನ್ನೆದುರು ಬಂದವರೇ...ಏನು? ಎಂದರು. ನನಗೆ ತಿಳಿಯಲಿಲ್ಲ. ನನ್ನ ಜೊತೆಯವರು
ಬರಲೆಂದು ಕಾಯುತ್ತಿದ್ದೇನೆ ಎಂದೆ. ಮತ್ತೆ ಕೈ ಬೀಸಿ ನಮ್ಮನ್ನು ಕರೆದೆಯಲ್ಲ ಎಂದರು. ಆಗ
ದೂರದಲ್ಲಿ ಬರುತ್ತಿದ್ದವರನ್ನು ತೋರಿದೆ. ಸಾರಿ ಎಂದೆ. ಪರವಾಗಿಲ್ಲ ಎಂದು ಕೈಕುಲುಕಿ ಹೊರಟರು.
ಇನ್ನು ಮುಂದಿನ ಪಾರ್ಲಿಮೆಂಟ ದರ್ಶನಕ್ಕೆ ಸಜ್ಜಾದೆವು. ನಮ್ಮ ಚೀಲಗಳಲ್ಲಿ ಒಂದನ್ನು
ಕುಳಿತಿದ್ದಲ್ಲೇ ಮರೆತು ಒಳಗೆ ಹೋದೆವು. ಮತ್ತೆ ಅಲ್ಲಿನ ಸೆಕ್ಯೂರಿಟಿ ಬಂದು ಜೊತೆಯಲ್ಲಿ
ನಮ್ಮಲ್ಲೊಬ್ಬರನ್ನು ಕರೆದೊಯ್ದು ಅದನ್ನು ತೆಗೆಸಿ ....ಎಲ್ಲ ಚೀಲಗಳನ್ನೂ ಚೆಕ್ ಮಾಡಿ ಅಲ್ಲಿನ
ಒಂದು ಸ್ಟಿಕರ್ ಪಾಸ್ ನಮ್ಮ ಬಟ್ಟೆಗೆ ಅಂಟಿಸಿದರು. ನಮ್ಮ ವಿವರ ಒಂದು ಫಾರ್ಮ್ನನಲ್ಲಿ ಭರ್ತಿ
ಮಾಡಿ ಕೊಟ್ಟೆವು. ನಂತರ ಸೋಫಿ ಎಂಬ ಮಹಿಳೆ ನಮ್ಮನ್ನೆಲ್ಲಾ ಕರೆದು ನಮ್ಮ ಬ್ಯಾಗ್ ಇಡಲು ಒಂದು
ಕಪಾಟು ತೋರಿಸಿ ನಂತರ ಅಲ್ಲಿನ ಕೋಣೆಗಳನ್ನೆಲ್ಲಾ ವಿವರಿಸಲು ತೊಡಗಿದಳು. ನಮ್ಮಲ್ಲಿಯಂತೆಯೇ
ಮೇಲ್ಮನೆ ಕೆಳಮನೆ ಎಂದು ಇದೆ. ಅದ್ಭುತವಾದ ಲೈಬ್ರರಿ ಇದೆ. ವಿಕ್ಟೋರಿಯಾ ಪ್ರತಿಮೆ ಅಲ್ಲಿನ
ಸ್ಪೀಕರ್ ಭವ್ಯ ಆಸನ ಎಲ್ಲ ಚೆನ್ನಿತ್ತು. ಆ ಗೈಡ್ ವಿವರಿಸಿದ್ದು ಬಹಳ ಹಿತವಾಗಿ ಕೂಲಂಕಷವಾಗಿ ಸಹ
ಇತ್ತು. ಅಲ್ಲಿಂದ ಮತ್ತೆ ಚೈನಾಟೌನ್ ಹೋಗಿ ಸ್ವಲ್ಪ್ ಉಳಿಕೆ ಶಾಪಿಂಗ್ ಮುಗಿಸಿ ಊಟ ಮಾಡಿ ರೂಮ್
ಸೇರಿದೆವು.
27
ಜುಲೈ - ಆಯಿತು. ನಾವು ಹೊರಡುವ ದಿನ ಬಂದೇ ಬಿಟ್ಟಿತು. ಹೊಟೆಲ್ ಹನ್ನೊಂದು ಗಂಟೆಗೇ ಚೆಕ್ ಔಟ್
ಆಗಬೇಕು. ನಮ್ಮ ವಿಮಾನ ಇದ್ದದ್ದು ಮಧ್ಯಾನ್ಹದ ಮೇಲೆ. ಸರಿ ಬಿಲ್ ಚುಕ್ತಾ ಮಾಡಿ ಲಗೇಜ್ ಅಲ್ಲೆ
ಹೊಟೆಲ್ನ ಲಗೇಜ್ ರೂಮಿಗ ತಳ್ಳಿ ಉಚಿತ ಟ್ರಾಮ್‍ನಲ್ಲಿ ಒಂದು ಸಣ್ಣ ರೌಂಡ್ ಮುಗಿಸಿ ಶರವಣ
ಭವನದಲ್ಲಿ ಕೊನೆಯ ಊಟ ಮಾಡಿದೆವು.ನಂತರ ಬುಕ್ ಆಗಿದ್ದ ಕ್ಯಾಬ್ ಬಂದ ಮೇಲೆ ತುಸು ಬೇಗನೆಯೇ
ವಿಮಾನನಿಲ್ದಾಣ ತಲುಪಿ ಚೆಕ್ ಇನ್ ಪ್ರಕ್ರಿಯೆ ಮುಗಿಸಿದೆವು. ಸಮಯಕ್ಕೆ ಸರಿಯಾಗಿ
ಮೆಲ್ಬೊರ್ನ್ಗೆ ಬೈ ಹೇಳಿ ಆಕಾಶ ಮುಟ್ಟಿದೆವು.
ಸಿಂಗಪುರ್ ತಲುಪಿದ ಮೇಲೆ ಸುಮಾರು ಸಮಯ ಅಲ್ಲಿನ ನಿಲ್ದಾಣದಲ್ಲೇ ಕಳೆಯಬೇಕಿತ್ತು. ಆಗ ಅಲ್ಲಿದ್ದ
ಒಂದೆರಡು ಗಾರ್ಡನ್‍ಗಳಿಗೆ ಭೇಟಿಯಿತ್ತು....ಕೆಲ ಸಮಯ ಕಾಲು ಮ್ಯಾಸೇಜ್ ಯಂತ್ರದಲ್ಲಿ ಕಾಲು
ಸಿಕ್ಕಿಸಿ ಆರಾಮಾದೆವು. ಬೆಳಗಿನ ಝಾವ ಥಟ್ಟನೆ ಟರ್ಮಿನಲ್ ಬದಲಿಸಿದ್ದರಿಂದ ಮಲಗಿದ್ದವರನ್ನು
ಎಚ್ಚರಿಸಿ ಲಗೇಜ್ ಹಿಡಿದು ಓಡಿದೆವು. ಬೆಳಗ್ಗೆ ಸಿಂಗಪೂರ್ ಬಿಡುವಾಗಿನ ಮೋಹಕ ಸೂರ್ಯೋದಯ ಹಿಂದಿನ
ರಾತ್ರಿಯ ಸುಂದರ ಚಂದ್ರದರ್ಶನಕ್ಕೆ ಪೂರಕವಾಗಿತ್ತು. ಮತ್ತೆ ಬೆಳಗ್ಗೆ ಹತ್ತು ಘಂಟೆ ಸುಮಾರಿಗೆ
ನಮ್ಮ ಬೆಂಗಳೂರಿನಲ್ಲಿ ಕಾಲಿಟ್ಟೆವು. ಭಾವಮೈದ ವೆಂಕಟೇಶ್ ಮತ್ತು ಅವರ ಅರ್ಧಾಂಗಿ ಭಗವತಿ ಹಾಗೂ
ನಮ್ಮ ಇನ್ನೊಬ್ಬ ಸಹಪ್ರಯಾಣಿಕಳಾಗಿದ್ದ ನಾದಿನಿ ಜ್ಯೋತಿ ಎಲ್ಲರಿಗೂ ವಿದಾಯ ಹೇಳಿ ನಾನು ನನ್ನವಳು
ಓಲಾ ಹಿಡಿದು ನಮ್ಮ ಮನೆ ಸೇರಿದೆವು.
==========================================================
ಮೋದಿ ಬಯಸುವ ಸ್ವಚ್ಛತೆ ಹೇಗಿರಬೇಕು ಎಂಬುದಂತೂ ಎಲ್ಲೆಲ್ಲೂ ಗೋಚರವಾಗುತ್ತಿತ್ತು. ಆಸ್ಟ್ರೇಲಿಯಾ ಪೋಲೀಸರೂ ನಿನ್ನ ವಿಚಾರಿಸುವಂತೆ ಮಾಡಿದ್ದು, ಶರವಣ ಭವನದ ತಿನಿಸು, ಗೈಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು, ೨೬೫ ಮೀಟರ್ ಎತ್ತರದಿಂದ ಪಟ್ಟಣದ ವೀಕ್ಷಣೆ, ಸಿಡ್ನಿ ಕ್ರಿಕೆಟ್ ಮೈದಾನ, ಸಿಂಗಪುರದ ಅನುಭವ ಎಲ್ಲವೂ ಬಹಳ ಸೊಗಸಾಗಿ ಅಚ್ಚುಕಟ್ಟಾಗಿ ಮೂಡಿಬಂದಿದೆ.
ReplyDelete