ಎತ್ತರದಿ ಹಾರುತ್ತಿರುವ
ಹದ್ದುಗಳ
ಕಣ್ ತಪ್ಪಿಸಿ
ಅತ್ತಿತ್ತಲಿಂ ಬಂದ
ವಾಹನಗಳ ನಡುವೆಯೇ
ರಸ್ತೆ ದಾಟಿ ಗೆದ್ದ
ಇಲಿಮರಿಯೊಂದು
ರಸ್ತೆಯ ಆ ಬದಿಯಲಿ
ನೆಮ್ಮದಿಯ ನಿಟ್ಟುಸಿರು
ಬಿಡುವಷ್ಟರಲ್ಲೇ ಅಲ್ಲಿದ್ದ
ಪೊದೆಯಿಂದ ಸದ್ದಿಲ್ಲದೆ
ನಾಗನಾಗಮನ
ಇತ್ತಲಿಂದ ಕೂಗಿದೆ ಮನ
ಏಯ್... ಎಲ್ಲಿದೆ ನಿನ್ನ ಗಮನ?
ಊಂಹೂಂ ... ಸಾಕ್ಷಿಯಾದೆ ನಾ
ಇಲಿಯ ಬಲಿಗೆ!
No comments:
Post a Comment