Wednesday, 28 March 2018

nage290318

ನಗ್ತೀರಾ_ಪ್ಲೀಸ್!
ಗುಂಡಿ ಮುಖ ಸಪ್ಪಗೆ ಮಾಡಿಕೊಂಡು ಕ್ಯಾಂಡಿ ಕ್ರಷ್ ಆಡುತ್ತಿದ್ದಳು ಎಂದಿನಂತೆ ತನ್ನ ಲೇಡೀಸ್ ಕ್ಲಬ್ ಕಡೆ ಹೋಗದೆ. ಗುಂಡನಿಗೆ ಅಚ್ಚರಿಯೋ ಅಚ್ಚರಿ. ಕೇಳಿದ 'ಯಾಕೆ ಡಾರ್ಲಿಂಗ್ ಕ್ಲಬ್ ಹೋಗೋಲ್ವಾ?'. ಅವಳು ಅವನತ್ತ ತಿರುಗದೇ ಹೇಳಿದಳು 'ಮುಂದಿನ ವಾರ ಅಲ್ಲಿ ಚುನಾವಣೆ'. 'ಮಂದಿನ ವಾರ ತಾನೇ...ಇವತ್ತು ಹೋಗೋಕೆ ಏನು' ಗುಂಡ ಮರುಪ್ರಶ್ನಿಸಿದ. ಮೊಬೈಲ್ ಪಕ್ಕ ಇಟ್ಟು ಇವನತ್ತ ಕೆಂಗಣ್ಣು ಬಿಟ್ಟು ಗುಂಡಿ ಇಂತೆಂದಳು ' ನೀತಿಸಂಹಿತೆಯಂತೆ....ಇಂದಿನಿಂದ ಇನ್ನೊಬ್ಬರ ಬಗ್ಯೆ ಮಾತನಾಡುವಂತಿಲ್ಲವಂತೆ ....ಮತ್ತೆ ಅಲ್ಲಿ ಹೋಗಿ ಇನ್ನೇನು ಮಾಡೋದು?'. ಈಗ ಗುಂಡನಿಗೆ ಜ್ಞಾನೋದಯವಾಯಿತು. ಕನಿಕರದಿಂದ ಅವಳ ತಲೆ ನೇವರಿಸಿದ.

No comments:

Post a Comment