Wednesday, 18 April 2018

nage180418

ಅಕ್ಷಯ ತೃತೀಯಾ ದಿನ ಮನೆಗೆ ಬಂದವನೇ ಗುಂಡ ಹೆಂಡತಿಯ ಕೈಯಲ್ಲಿ ಒಂದು ಸಣ್ಣ ಉಡುಗೊರೆಯ ಪ್ಯಾಕೆಟ್ ಇಟ್ಟ. ಸೀರೆ ತರಬಹುದೆಂದುಕೊಂಡಿದ್ದವಳು ಏನೋ ಒಡವೆಯನ್ನೇ ತಂದಿದ್ದಾನೆಂದು ಸಡಗರದಿಂದ ಅದನ್ನು ತೆಗೆದು ನೋಡಿದರೆ ...... ಅದರಲ್ಲಿ ಆರು ಪುಟ್ಟ ಕರವಸ್ತ್ರಗಳಿದ್ದವು. ಹಲ್ಲು ಕಿರಿಯುತ್ತಾ ಗುಂಡ ಕೇಳಿದ 'ಹೇಗಿದೆ? ಇದು ನೂರು ಪಟ್ಟು ಅಕ್ಷಯವಾಗಿ ಸೀರೆಯಾಗುತ್ತದೆ ... ಅದಕ್ಕೇ ಆರು ಬೇರೆ ಬೇರೆ ಬಣ್ಣದಲ್ಲಿ ತಂದಿದ್ದೇನೆ.... ಅಂದ ಹಾಗೆ ಸಾಕಾಗಿದೆ ಒಂದು ಲೋಟ ಬಿಸಿಬಿಸಿ ಕಾಫಿ ಕೊಡೇ'.
ಒಂದು ದೊಡ್ಡ ಲೋಟದಲ್ಲಿ ಒಂದು ಚಮಚೆಯಷ್ಟು ಕಾಫಿ ತಂದು ಅವನ ಕೈಲಿಟ್ಟು 'ಇದು ಅಕ್ಷಯವಾಗಿ ಲೋಟ ತುಂಬಿದಾಗ ಕುಡಿಯಿರಿ' ಎಂದವಳೇ ಕೋಣೆ ಸೇರಿ ಧಡಾರನೆ ಬಾಗಿಲು ಬಡಿದ ರಭಸಕ್ಕೆ ಅವನ ಕೈಲಿದ್ದ ಲೋಟ ಚಮಚೆ ಕಾಫಿಯೊಡನೆ ನೆಲ ಕಚ್ಚಿತೆನ್ನುವಲ್ಲಿಗೆ ಅಕ್ಷಯತೃತೀಯಾ ಸಂಪೂರ್ಣಂ.

No comments:

Post a Comment