Friday, 8 June 2018

ನಿ:ಸ್ಪೃಹ

ಎತ್ತರದ ಅಲೆಯೊಂದು
ಬರುತಿರುವುದ ನೋಡಿ
ಉಬ್ಬಿ
ತುಟಿ ಮುಂದಿಕ್ಕಿದ
ದಡ
ತನ್ನತ್ತಲಿಂದಲೇ
ಹೋದ ಮುಂಚಿನಾ
ಅಲೆ
ಬರುವಲೆಯ ತನ್ನೊಡನೆ
ಮರಳಿ ಒಯ್ದುದ
ಕಂಡು
ಆಸೆ ದು:ಖಕ್ಕೆ ಮೂಲ
ಎಂಬ
ಅರಿವು ಪಡೆಯಿತು...
ಮುಂದೆ
ನಿ:ಸ್ಪೃಹವಾಗಿ ಉಳಿಯಿತು!

No comments:

Post a Comment