Friday, 27 July 2018

ನಾಮ ಹಲವು

ನಾಮ ಹಲವು
__________


ಸಹೋದ್ಯೋಗಿಯೊಬ್ಬ ನನ್ನಂತೆಯೇ ದಿನಾ ಒಂಟಿ ಕೆಂಪು ನಾಮ ಹಣೆಯ ಮೇಲೆ ಎಳೆದುಕೊಳ್ಳುತ್ತಿದ್ದ. ಒಂದು ದಿನ ಆ ನಾಮ ಸ್ವಲ್ಪ ಪೀಸಾ ಗೋಪುರದಂತೆ ಸೊಟ್ಟಗಿತ್ತು. ಕೇಳಬೇಕಾ? ಕಾಲೆಳೆಯಲು ಇನ್ನೊಬ್ಬ ಮಿತ್ರ ' ಏನ್ರೀ ನಾಮ ಸೊಟ್ಟಗಾಗಿಬಿಟ್ಟಿದೆ.. ನಿದ್ರೆಗಣ್ಣಲ್ಲಿ ಎಳೆದದ್ದಾ?' ಅಂದ. ಇವನೂ ಚಾಲಾಕಿ. 'ಇಲ್ಲಪ್ಪ.... ಇವತ್ತು italicsನಲ್ಲಿಟ್ಟಿದ್ದೀನಿ' ಎಂದು ನಗುತ್ತಲೇ ಉತ್ತರಿಸಿದ. ಕೇಳಿದವ ತೆಪ್ಪಗಾದ.

No comments:

Post a Comment