Monday, 30 August 2021

ಶ್ರೀಕೃಷ್ಣ ಜನ್ಮಾಷ್ಟಮಿ

 

 
ಬಿದ್ದು ಯಮುನೆಯ ಒಳಗೆ
ಎದ್ದು ಕಾಳಿಂಗನ ಮೇಲೆ
ಒದ್ದ ಶಕಟಾಸುರನ
ಮುದ್ದು ಬಾಲಗೋಪಾಲ!
ಸದ್ದು ಮಾಡದೆ ತಾನು
ಕದ್ದ ಬೆಣ್ಣೆಯನೆಲ್ಲ
ಮೆದ್ದ ಮರೆಯಲ್ಲಿಯೇ
ಮುದ್ದು ಬಾಲಗೋಪಾಲ!
ತಿದ್ದಿ ನೋಡಿದ ಮೊದಲು
ಖುದ್ದು ತಾನೇ ಬಂದ
ಬುದ್ಧಿ ಹೇಳಿದ ನಮಗೆ
ಮುದ್ದು ಬಾಲಗೋಪಾಲ!
ಬುದ್ಧ ಇವನೇ ಪರಿ-
ಶುದ್ಧ ಇವನೇ ಜಗದಿ
ಬದ್ಧ ಒಳಿತು ಮಾಡಲು ಈ
ಮುದ್ದು ಬಾಲಗೋಪಾಲ!

1 comment:

  1. ಯಾವುದೋ ಒಂದು ರಾಗದಲ್ಲಿ ಹಾಡಿಕೊಂಡೆ.
    ಪಟದಲ್ಲಿನ ಗೋಪಾಲ ಮುದ್ದಾಗಿ ನಕ್ಕಂತೆ ಭಾಸವಾಯಿತು.
    ಲವ್ಲಿ.

    ReplyDelete