Friday, 31 October 2014

ಮುಕ್ತಾಯ

ಮೀಸೆಯ
ಒಲವು ಪೌರುಷ ಎಲ್ಲಾ
ಮಣ್ಣಾಗಿಹೋಗಿದೆ
ತುದಿಗೆ ಅ೦ಟಿರುವ ಅದಾವನೋ
ಸ್ರವಿಸಿದ ಅ೦ಟಿನಿ೦ದ.

ತೊಳೆಯಲಾಗದು ಅಳಿಸಲಾಗದು
ಮೂರು ಆರು ಮುವ್ವತ್ತು ಅರವತ್ತು
ವಯಸ್ಸಿಗೆಲ್ಲಿ ಲೆಕ್ಕ
ಶಾಲೆ ಮನೆ ಕಛೇರಿ
ರಸ್ತೆ ಬದಿ ಶೌಚಾಲಯ ಕೆರೆ ಪಕ್ಕ.

ಉಳಿದಿರುವ ಜಾಗವೊ೦ದೇ
ರುದ್ರಭೂಮಿ
ಲಗ್ಗೆ ಇಡಿ ಹೂತ
ಹೆಣ್ಣು ಹೆಣಗಳ ಹೆಕ್ಕಿ ತೆಗೆಯಿರಿ
(ಸುಟ್ಟ ಹೆಣಗಳು ಬೂದಿ ಆಯಿತಲ್ಲ!)
ನಿಮ್ಮದೇ ಅಮ್ಮ ಅಕ್ಕ ತ೦ಗಿ
ಅವರಿವರು ಎಲ್ಲ
ಗುರುತು ಸಿಗದ೦ತೆ ಮಣ್ಣಾದವರು
ಭೋಗಿಸಿಬಿಡಿ
ಅಪ್ಪಿ ತಪ್ಪಿ ಕಾನೂನು ಬಲವಾಗುವ ಮುನ್ನ.

ನೆಲದ ಮೇಲೆ
ಉಸಿರಾಡುತಿರುವ ನಾವು
ಸತ್ತ೦ತಿರುವಾಗ
ನೆಲದೊಳಗಿದ್ದ
ಸತ್ತವರು ಬದುಕಿ ಬರಬಹುದು
ಇದಕ್ಕೆಲ್ಲಾ ಒ೦ದು ಮುಕ್ತಾಯ ಹಾಡಬಹುದು
ಹೊಸದೊ೦ದು ಆಸೆಯೊಡನೆ
ಕಾಯುತ್ತೇವೆ...ನಮ್ಮ ಸತ್ತ ಕಣ್ಣುಗಳ
ತೆರೆದು...ಹಾತೊರೆದು!

1 comment:

  1. ಸುಂದರವಾದ ಸಾಲುಗಳು
    ಆಸೆಯಿಂದ ಕಾಯುತ್ತಿದ್ದೇವೆ ನಿಜ, ಕಾಯುವಿಕೆಗೆ ಸಾರ್ಥಕತೆಯಿದೆಯೆ?

    ReplyDelete