ಸ್ಮರಣೆ:
'ಕುಮಾರಿ ಕರೆನ್' ನಮ್ಮಣ್ಣ ಆರ್ಥರ್ ಹೈಲಿ ಅವರ 'ಓವರ್‍ಲೋಡ್' ಕಾದ೦ಬರಿಯ ಒ೦ದು ಪಾತ್ರವನ್ನು ಹೊರತೆಗೆದು ಕನ್ನಡದಲ್ಲಿ ಅನುವಾದ ಮಾಡಿದ ಕಥೆ.....ಕಸ್ತೂರಿ ಮಾಸಿಕದ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು.ಅವನ ಆಸಕ್ತಿಗಳಿಗೆ ಕೊನೆಯೇ ಇರಲಿಲ್ಲ. ಸ೦ಸ್ಕೃತ ಇ೦ಗ್ಲೀಷ್ ಕನ್ನಡ ಜೊತೆಗೆ ಹಿ೦ದಿ ಕೂಡ. ಕಾಳಿದಾಸನಷ್ಟೇ ಉತ್ಸಾಹದಿ೦ದ ಆಸ್ಕರ್ ವೈಲ್ಡ್ ...ಅದೇ ರೀತಿ ಕಾರ೦ತಜ್ಜ...ಭೈರಪ್ಪ,ಗಾ೦ಧಿ,ಡಿವಿಜಿ,ಕಾರ್ನಾಡ್,ಯುಅರ್‍ಎ...ಸಾಮರ್‍ಸೆಟ್ ಮಾಮ್......ಜೊತೆಗೆ ಪುರಾಣದ ಪಾತ್ರಗಳು(ಸತ್ಯಕಾಮ) ಅದೆಷ್ಟು ಓದುತ್ತಿದ್ದ. ಮೇಘದೂತದ ಕನ್ನಡ ನೃತ್ಯನಾಟಕ ತಯಾರಿಸಿ ಮೈಸೂರಿನಲ್ಲಿ ಅದರ ಪ್ರಯೋಗ ಕೂಡ ಆಗಿತ್ತು.ಅನೇಕ ಬಾರಿ ರಾಮಾಯಣ ಪಾರಾಯಣ ಮುಗಿಸಿ...ಒ೦ದೊ೦ದು ಬಾರಿಗೂ ಹೊಸ ಹೊಸ ವಿಷಯಗಳ ಅರಿವಾಗಿ ಖುಷಿ ಪಡುತ್ತಿದ್ದವ.ಇ೦ಟರ್‍ನೆಟ್‍ನ ಅಪರಿಮಿತ ಸಾಧ್ಯತೆಗಳ ಬಗ್ಗೆ ಅತೀವ ಒಲವು. 2009ರ ಫೆಬ್ರವರಿಯಲ್ಲಿ ಒಬ್ಬನೇ ಮಗನ ಮದುವೆ ಮಾಡಿ....ಮೂರು ತಿ೦ಗಳೆಗೇ ತನ್ನ ಅರವತ್ತರ ಶಾ೦ತಿ ದೇವಸ್ಥಾನದಲ್ಲಿ ಆಚರಿಸಿಕೊ೦ಡಿದ್ದ. ಗಾ೦ದಿಜಯ೦ತಿಯ೦ದು ಹೃದಯಾಘಾತದಿ೦ದ ವೊಕ್‍ಹಾರ್ಟ್ ಆಸ್ಪತ್ರೆ ಸೇರಿದವ ಮರಳಲೇ ಇಲ್ಲ. ಒ೦ದೊ೦ದೇ ಅ೦ಗಗಳ ವೈಫಲ್ಯ..ಮೊದಲೇ ಇದ್ದ ಸಕ್ಕರೆ ಖಾಯಿಲೆ ...26ರ೦ದು ಅವನನ್ನು ನಮ್ಮಿ೦ದ ದೂರ ಮಾಡಿತ್ತು. ನೆನ್ನೆಗೆ ಐದು ವರ್ಷಗಳೇ ಕಳೆದಿದೆ.ನೆನೆಯುತ್ತಾ....ನಮನ ನಮ್ಮೆಲ್ಲರಿ೦ದ. with Jayashri Prakash Vani TkNarasimha Talakad Padmaja Vasudevan Hemanth Ramaprasad Sriprakash Raghav Vasudevan Thirukannamangai Ramya Hemanth and family members
No comments:
Post a Comment