Monday, 19 January 2015

ttt190115

Terribly Tiny Tale:
Theirs was a forbidden love.
Each time they met covertly,
they'd be rudely separated
& given an earful.
Poor earphone.
- Karthik

ಪ್ರೇಮ ವಿರೋಧಿ ಸಮಾಜದ ಕಣ್ಣು
ತಪ್ಪಿಸಿ ಸೇರುವ ಅವರಾಸೆ ಮಣ್ಣು
ಆದರೇನು ಹೊಕ್ಕ ಕಿವಿಗಳ ನಡುವೆ
ಹರಿದದ್ದೂ ಒಲವಿನ ಮಡುವೇ!

Saturday, 17 January 2015

ttt160115

Terribly Tiny Tale:
Once upon a time, Answers
asked for their fee. Questions
laughed, turn around and 
said, "I've taught you more."
- Sreshtha
ಉತ್ತರಕೆ ದಕ್ಷಿಣೆಯಾ?
ದಿಕ್ಕು ತಪ್ಪಿಸಿದ
ಪ್ರಶ್ನೆಗೆ ಉತ್ತರವಿಲ್ಲ!

ಮುಖವಾಡ

ಒ೦ದೊ೦ದಾಗಿ
ಜಾರಿದ
ನಿನ್ನ
ಮುಖವಾಡಗಳ
ಆರಿಸುತ್ತಲೇ ಇವೆ
ಆರ್ದ್ರ ಕ೦ಗಳು
ಕಲ್ಲೆದೆ!

ttt011214

Terribly Tiny Tale:
I am born now
as you read me.
Word by word 
I will fill you with my life.
As you finish, I will die.
I am this tale.
Crying to live again.

ನಿನ್ನೀ ಓದಿನೊಡನೆ
ನನ್ನ ಹುಟ್ಟು
ಪದಪದಗಳೊಡನೆ
ತು೦ಬುವೆ ನಿನ್ನ ಬದುಕ
ಕೊನೆ ತಲುಪಿದ೦ತೆ ನೀ
ಕೊನೆಯಾಗುವೆ ನಾ
ನಾನೀ ಕಥೆ
ಮತ್ತೆ ಬದುಕ ಬಯಸುವ ವ್ಯಥೆ!

ttt031214

Terribly Tiny Tales:
2 strangers met on a dark, 
desolate road.
No light. 
Only comforting conversation.
When the candle was lit, 
they both felt unsafe.

ಬೆಳಕಿಲ್ಲದ ಆ ನಿರ್ಜನ ರಸ್ತೆಯಲ್ಲಿ
ಅಪರಿಚಿತರಿಬ್ಬರು ತೊಡಗಿದ್ದರು ನೆಮ್ಮದಿಯ ಮಾತಿನಲ್ಲಿ
ಬೆಳಕ ಕ೦ಡೊಡನೆ ಏಕೋ ಅಸುರಕ್ಷಿತ ಭಾವ ಅವರಲ್ಲಿ!

ttt041214

Terribly Tiny Tales:
I tried for many years.
Couldn't conceive. 
They didn't let me adopt. 
or keep a pet. 
So, I raised a book.
Finally I am a mother!
Original by: Shreshtha

ಹೆತ್ತು ಕೊಡಲಾಗಲಿಲ್ಲ
ದತ್ತು ಪಡೆಯಲು ಬಿಡಲಿಲ್ಲ
ಬೆಕ್ಕು ನಾಯಿ ಗಿಳಿಯೂ ಇಲ್ಲ
ಒ೦ದು ಪುಸ್ತಕ ಹೊರ ತ೦ದೆ
ತಾಯಾದೆ ಬೇಕಿರಲಿಲ್ಲ ತ೦ದೆ!

ttt081214

Terribly tiny tale
Amma was unusually quiet, 
but her eyes spoke a book.
Now her grandchildren read 
tales in mine. 
Some stories are best kept 
within the family.

ಅಮ್ಮ ಅಪರೂಪಕ್ಕೆ ಮೌನಿಯಾಗಿ
ಸುಮ್ಮನಿದ್ದರೂ ಕಣ್ಣಲ್ಲಿ ತೆರೆದಿಟ್ಟ ಪುಸ್ತಕ
ಇ೦ದವಳ ಮೊಮ್ಮಕ್ಕಳು
ಓದುತಿಹರು ನನ್ನ ಕ೦ಗಳಲಿ
ಏಕೆ೦ದರೆ ಕೆಲ ಕಥೆಗಳಿಗೆ
ಉಳಿವೇ ಮನೆಯ೦ಗಳದಲಿ!

ttt101214

Terribly Tiny Tale:
Winds, on whistling choir. 
Leaves on tambourine. 
Thunder on percussion. 
God on vocals. 
Nature's song, now playing.
- By, Bodhisatwa

ತ೦ಗಾಳಿಯ ಸು೦ಯಿಗೆ ಎಲೆಗಳ ಶೃತಿಯೊಡನೆ
ಮುಗಿಲ ಗರ್ಜನೆಯ ಮೃದ೦ಗ ದೈವ ಗಾಯನ
ಈಗ ಇಲ್ಲಿ ನಡೆದಿದೆ ಪ್ರಕೃತಿಯ ಸ೦ಗೀತ!

ttt121214

Terribly Tiny Tale:
She screamed
She cried
She begged
Curtains fell. 
Play ended.
Her pain didn't.

- By Sultana
ಅಳು
ಆರ್ತನಾದ
ಬೇಡಿಕೆಯ ಬೆನ್ನಲ್ಲೇ
ಜಾರಿತು ಅ೦ಕದ ಪರದೆ...
ಅವಳ ನೋವಿಗೆ ಕೊನೆಯೇ ಬರದೆ!

ttt151214

Terribly Tiny Tale
This chap I know clicks
tons of photos of smiles.
So I asked him why.
'I am making a museum.'
'The World's Happiest Place'
-By Prathap

ಕ್ಲಿಕ್ಕಿಸಿದ ಮಹಾನುಭಾವ
ಕಿಸಿದ ನಗುಗಳ ಸಾವಿರಾರು...
ಏಕೆ೦ದರೆ ಅವ ಹೇಳುವುದು ನೋಡಿ
"ನಗೆಯಾಲಯ ಕಟ್ಟಿ
ಹರಿಸುವೆ ಸ೦ತಸದ ಕೋಡಿ!"

ttt221214

Terribly Tiny Tale
Years rolled by 
But the lines remained 
One day, I decided to cross them 
And the years paused to watch
They whispered –
“It’s about time”.
- Ankita

ವರುಷಗಳುರುಳಿದವು
ರೇಖೆಗಳುಳಿದವು.ಅದೊ೦ದು ದಿನ
ಅವನ್ನು ದಾಟುವ ಧೈರ್ಯ ಮಾಡಿದೆ
ನಿ೦ತು ನೋಡುತ ವರುಷಗಳುಲಿದವು
ಮೆಲ್ಲಗೆ -"ಸಮಯ ಬ೦ದ೦ತಿದೆ"!

ttt261214

Terribly Tiny Tales:

Second honeymoon. 
Skin has wrinkled.
Hair has grayed. 
But the sea is as fresh as a new morning.
and the sand is as white as a ..
new page!
- Kruttika

ಮತ್ತೆ ಮಧುಚ೦ದ್ರದ ಸೊಕ್ಕು
ತಲೆ ನರೆತರೇನ್ ತೊಗಲಾದರೇನ್ ಸುಕ್ಕು
ನಸುಕಿನ ತಾಜಾತನದ ಕಡಲೊಡನಾಡಲು
ಖಾಲಿ ಪುಟದ೦ದದ ಮರಳು!

ttt3012

Terribly Tiny Tale:
coin from my first pay
strand of her long hair
shell from a secret beach
photo of my parents
i dont have much money
but my wallet is rich
- prathap

ಮೊದಲ ಪಗಾರದ ಆ ಪುಟ್ಟ ನಾಣ್ಯ
ನಶೆ ಹತ್ತಿಸುವ ಆವಳ ಉದ್ದ ಕೂದಲೊ೦ದು
ಗುಟ್ಟಾಗಿ ಕಡಲಿ೦ದ ತ೦ದ ಈ ಪುಟ್ಟ ಶ೦ಕು
ಹೆತ್ತವರ ಹೆಸರು ಮತ್ತವರ ಭಾವಚಿತ್ರ
ಹಣವಿಲ್ಲದಿರಲೇನು - ಅನರ್ಘ್ಯ ನನ್ನ ಈ ಸ೦ಚಿ!

Wednesday, 14 January 2015

ttt020115

Terribly Tiny Tale
What was left unsaid between
us was written with stars in the
moonless sky. And there you
were, searching my eyes for answers.
- chintan

 ಉಲಿಯದೇ ಉಳಿದವು
ಚ೦ದ್ರನಿರದಿರುಳ ತಾರೆಗಳಾದವು
ಪ್ರಶ್ನಿಸದೆ ನೀ ಹುಡುಕುತ್ತಿರುವೆ
ಉತ್ತರಗಳ ನನ್ನ ಕ೦ಗಳಲಿ!

Tuesday, 13 January 2015

ttt050115

Terribly Tiny Tale:
He came to the city to make it big.
In a small house.
But his mind had a large balcony
That owned the world.
ಬೆಳೆವಾಸೆಯಲಿ ಪಟ್ಟಣ ಸೇರಿದವ
ಇದ್ದದ್ದು ಒ೦ದು ಪುಟ್ಟ ಸೂರಿನಡಿ
ಆದರೇನು...ಮನವೆ೦ಬ ಮುಕ್ತ ಅ೦ಗಳ
ತನ್ನದಾಗಿಸಿಕೊ೦ಡಿತ್ತು ಜಗದ ಉದ್ದಗಲ!

tttself1

ಇ೦ದಿನ ಅನುವಾದದ ಆಟಕ್ಕೆ ನನ್ನದೇ ಕಥೆ ಆರಿಸಿದ್ದಕ್ಕೆ ಧನ್ಯವಾದ ಹೇಳುತ್ತಾ.....with Jayalaxmi Patil
Micro Story:
Scream..followed by silence
she slowly limped out
for once..it was he who
lied still in a pool of blood!
-SRINIDHI Tk
ಚೀತ್ಕರಿಸಿದ್ದಾರು?....ಮತ್ತೆ ನೀರವ ಮೌನ
ತತ್ತರಿಸಿ ಹೊರ ಬ೦ದವಳ ಹಿ೦ದೆ ಕೆ೦ಪಾದ ನೆಲವು
ಬೇಟೆಗಾರನ ಬೇಟೆಯಾಡಿದ ಬೇಟೆಯ ಗೆಲುವು!

ttt090115

Terribly Tiny Tale:
In the war against terror, 
the enemy was outside. 
Inside what they ruthlessly buried
was but a seed.
-vallari
ಆತ೦ಕವಾದದೆದುರು ಯುದ್ಧ
ಶತ್ರು ಹೊರಗೇ ಇದ್ದ
ವಿಷಾದದ ವಿಷಯವೆ೦ದರೆ
ವಿಷದ ಬೀಜ ಒಳಗೇ ಬಿತ್ತಿದ್ದ.

ttt120115

Terribly Tiny Tale:
"You know, there's an entire
Ocean of stories residing in
one shell."
"Sounds like Home"
- ttt team
"ಕಡಲಷ್ಟು ಕಥೆಗಳು ಕಾಪಿಟ್ಟಿವೆ ಒ೦ದು ಚಿಪ್ಪಿನಲಿ"
"ಆಹ್!! ತವರಿಗೆ ಮರಳಿದ೦ತಾಯ್ತು"

ttt140115

Terribly Tiny Tale:
"You'r wasting your time", 
said I. "If you are looking for
a story here. Go out into 
the street. You'll find them
walking around".
- Bodhisatwa

ಕಥೆಯಾ?
ಅಡ್ಡಾಡು ಹೋಗು ಹೊರಗೆ
ಆಡುತಿವೆ ಅಲ್ಲಿ ಅಡಿಗೊ೦ದು..ರಸ್ತೆಯಲಿ!

ಸ೦ಶೋಧನೆ


 
ನಿನ್ನ ಕ೦ಡ೦ದೇ ಗೆಳತೀ
ಖಗೋಳ ವಿಜ್ಞಾನಿಯಾದೆ!
ಅವಿರತ ಸ೦ಶೋಧನೆಯಿ೦ದ
ನೋಡು ಏನು ಕ೦ಡುಹಿಡಿದೆ!
ಚ೦ದ್ರನೊ೦ದು ಉಪಗ್ರಹವಲ್ಲ
ಎಲ್ಲ ಬಿ೦ಬಿಸುವ ಶುಭ್ರ ಕನ್ನಡಿ|
ಅವ ಸುತ್ತುವುದು ನಿಯತವಾಗಿ
ನಿನ್ನನ್ನು ಪ್ರಿಯೆ ಭೂಮಿಯನ್ನಲ್ಲ|
ಮುಖ ಕ೦ಡಾಗ ಹಾಲು ಬೆಳದಿ೦ಗಳು
ಮುಡಿ ಬ೦ದಾಗ ದಟ್ಟ ಕಾರಿರುಳು|

Wednesday, 7 January 2015

SILENCE

SILENCE
-------

People...
understood,
misunderstood,
loved,
hated,
commended,
criticised,
and even
tolerated
my SILENCE.
But
I am
amazed at
how by just
being itself
it answered
all in
their own coins.
My SILENCE
was
never my weakness
might have weakened
others...because
it was ..and is
my strength..
MY SILENCE!

ಬೆರಗೆ೦ದರೆ...


ಬೇರಾರಿಗೂ
ಕಾಣದೆ
ತಳ ಸೇರಿರುವ
ಬೇರೊ೦ದಿಗೆ.....
ಅದ ಕಾಣದ೦ತೆ
ಬೇರೆ ಆಗಿ
ಬಳ್ಳಿಯಲಿ
ಬಿರಿದ ಮೊಗ್ಗಿನ
ಬ೦ಧ!