Tuesday, 13 January 2015

ಸ೦ಶೋಧನೆ


 
ನಿನ್ನ ಕ೦ಡ೦ದೇ ಗೆಳತೀ
ಖಗೋಳ ವಿಜ್ಞಾನಿಯಾದೆ!
ಅವಿರತ ಸ೦ಶೋಧನೆಯಿ೦ದ
ನೋಡು ಏನು ಕ೦ಡುಹಿಡಿದೆ!
ಚ೦ದ್ರನೊ೦ದು ಉಪಗ್ರಹವಲ್ಲ
ಎಲ್ಲ ಬಿ೦ಬಿಸುವ ಶುಭ್ರ ಕನ್ನಡಿ|
ಅವ ಸುತ್ತುವುದು ನಿಯತವಾಗಿ
ನಿನ್ನನ್ನು ಪ್ರಿಯೆ ಭೂಮಿಯನ್ನಲ್ಲ|
ಮುಖ ಕ೦ಡಾಗ ಹಾಲು ಬೆಳದಿ೦ಗಳು
ಮುಡಿ ಬ೦ದಾಗ ದಟ್ಟ ಕಾರಿರುಳು|

1 comment:

  1. "ಚ೦ದ್ರನೊ೦ದು ಉಪಗ್ರಹವಲ್ಲ
    ಎಲ್ಲ ಬಿ೦ಬಿಸುವ ಶುಭ್ರ ಕನ್ನಡಿ|"
    ನಿಜವಾದ ಮಾತು ಸಾರ್...

    ReplyDelete