ಗುಂಡಿ ಕ್ಲಬ್‍ನಲ್ಲಿ ಮಹಿಳಾ ದಿನಾಚರಣೆ ಅಂಗವಾಗಿ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದವು. ಅವಳ ಗಂಡ ಮಹಾನ್ ಸಾಹಿತಿ ಗುಂಡನೇ ಮುಖ್ಯ ಅತಿಥಿ.ಮನೆಯಿಂದ ಹೊರಡುವಾಗಲೇ ಯಾವ ಕಾರಣಕ್ಕೂ ನನ್ನಮ್ಮ ನನ್ನಮ್ಮ ಅಂತ ಕಥೆ ಹೊಡೀಬೇಡಿ ಅಂತ ಕಿವಿ ಹಿಂಡಿದ್ದಳು.ನನ್ನ ಬಗ್ಯೆ ಕೊಚ್ಚಿಕೊಳ್ಳಿ ಪರವಾಗಿಲ್ಲ ಅಂತ ಸೇರಿಸಲು ಮರೆಯಲಿಲ್ಲ. ಗುಂಡ ಭಾಷಣ ಮಾಡುತ್ತಾ ಹೇಳಿದ "ನನ್ನ ಈ ಎಲ್ಲ ಸಾಧನೆಗಳಿಗೆ ನನ್ನ ಪ್ರೀತಿಯ ಹೆಂಡತಿ ಗುಂಡಿ ಹಾಗೂ ಅವಳತ್ತೆ ಅವರುಗಳೇ ಕಾರಣ'. ಎಲ್ಲ ಚಪ್ಪಾಳೆ ತಟ್ಟಿದರು. ತನ್ನ ಹೆಸರು ಕೇಳಿದ ಗುಂಡಿ ಕೂಡ. ತನ್ನ ಮಾತಿನ ಚಾಣಾಕ್ಷತನಕ್ಕೆ ತಾನೇ ಒಮ್ಮೆ ಬೆನ್ನು ತಟ್ಟಿಕೊಂಡ ಗುಂಡ.
No comments:
Post a Comment