Monday, 29 April 2019

ಆಶಯ



ಬೆರೆಯಬೇಕೆನಿಸುತ್ತದೆ ಕೆಲವೊಮ್ಮೆ
ಬೇರೆ ಇರಬೇಕೆನಿಸುತ್ತದೆ ಇನ್ನು ಕೆಲವೊಮ್ಮೆ
ಬಿರಿದ ಹೂವಾಗುತ್ತದೆ ಮನ ಕೆಲವೊಮ್ಮೆ
ಬರಿದೆ ಮೊಗ್ಗಾಗಿಯೇ ಇರುತ್ತದೆ ಮತ್ತೆ ಕೆಲವೊಮ್ಮೆ
ಬುರುಬುರನೆ ಉಕ್ಕುವ ಉತ್ಸಾಹ ಕೆಲವೊಮ್ಮೆ
ಬರದೆ ಮೊಂಡು ಹಿಡಿದು ನಿಂತ ದನದಂತೆ ಕೆಲವೊಮ್ಮೆ
ಬೇರೆ ಬೇರೆಯದೇ ಆಯಾಮಗಳು ಬದುಕಿನುದ್ದಕೂ
ಬೇರಿಗೆ ಬೆಸೆದುಕೊಂಡ ನೂರು ಕೊಂಡಿಗಳು
ಬರಸೆಳೆದೋ ಬರೆ ಎಳೆದೋ ನಾ
ಬರಿದಾಗುವವರೆಗೆ ಬರೆಸುತ್ತಲೇ ಇರಬೇಕು!

2 comments:

  1. ತುಂಬ ಚೆನ್ನಾಗಿ ಬರೆದಿದ್ದೀರಿ

    ReplyDelete
    Replies
    1. ಧನ್ಯವಾದಗಳು ಗೆಳೆಯ

      Delete