Wednesday 4 February 2015

ಅರಿವು

ಅರಿ ಯಾರು?
ಅರಿಯರು
ಯಾರೂ...
ಸುತ್ತ ಮುತ್ತ
ಎಲ್ಲ ಹುಡುಕಿ
ಇಲ್ಲ ಯಾರೂ
ಎ೦ದು ಸಮಾಧಾನ
ಪಡುವ ಅವರಿಗೆ....
ತಮ್ಮಲ್ಲೇ
ಇರುವ
ಕಾಮ ಕ್ರೋಧ
ಲೋಭ ಮೋಹ
ಮದ ಮತ್ಸರಗಳೇ
ಅರಿ ಆರು
ಎ೦ಬ
ಅರಿವಾಗಬೇಕಿದೆ!

1 comment:

  1. ಅರಿ ಆರು ಮಾರ್ಮಿಕವಾಗಿದೆ.

    ReplyDelete