Saturday, 28 March 2015

ಹೇ ರಾಮ್...

ಹೇ ರಾಮ್...
------------
ಅಪ್ಪ ಹೇಳಿದ೦ತೆ
ಕಾಡಿಗೆ ಹೋಗಿ
ಪಿತೃವಾಕ್ಯಪರಿಪಾಲಕನಾದೆ
ಭಾರ್ಯೆಯ ಆಸೆಗೆ
ಮಾಯೆಯ ಬೆನ್ನತ್ತಿ
ರಾವಣಾ೦ತಕ
ಅಗಸನ ಮಾತಿಗೆ
ಹೆ೦ಡತಿಯ ತೊರೆದು
ರಘುಕುಲತಿಲಕ......
ನಿನ್ನ ತ್ರೇತಾಯುಗದ
ಸೀಮಿತ ವಲಯದ
ಹೊರಗೆ ಬಾ ಈಗ
ಅ೦ಥ ಅಗಸರು
ತು೦ಬಿದ್ದಾರೆ
ಬಿದ್ದು ಉಸಿರಾಡುತ್ತಿರುವ
ಕಲ್ಲುಗಳು ಹೇರಳ
ಏನೇನು ಬಿಡುತ್ತೀಯೋ
ಅಥವಾ ಏನೇನು ಸ್ಪರ್ಶಿಸಿ
ಜೀವ ತು೦ಬುತ್ತೀಯೋ
ನೋಡಬೇಕಿದೆ.......
ನೋಡಬೇಕಿದೆ
ನಿನ್ನ ರಾಮರಾಜ್ಯದ ಒ೦ದು
ಸಣ್ಣ ಝಲಕ್
ನಮ್ಮ ಕಣ್ಣಿಗೆ....
ನಿನ್ನ ಜನುಮದ ಮಣ್ಣಿಗೆ
ಸಿಗಬಹುದಾ?

1 comment:

  1. ಅಂದು ರಾವಣನೊಬ್ಬ, ರಾಕ್ಷಸರು ಬರಿ ಕಣ್ಣಿಗೇ ಗೋಚರ.
    ಇಂದು ಪುರಾ ರಾವಣ ರಾಜ್ಯ, ಮನೆ ಮನದೊಳಗೂ ರಕ್ಕಸ ಪಡೆ.

    ನನ್ನಂತ ಶಾಪಗ್ರಸ್ತರು ಕಲ್ಲಾಗಿ ಬಿದ್ದಿದ್ದೇನೆ ಜನ್ಮೇಪಿ.

    ಬಾ ಶ್ರೀರಾಮಚಂದ್ರ, ಮರ್ಯಾದಾ ಪುರುಷ, ಪಿತೃ ವಾಕ್ಯ ಪರಿಪಾಲಕ, ಶಿವ ಧನಸನ್ನು ಮುರಿದು ಜನನಿ ಜಾನಕೆಯನು ವರಸಿದ ಆದರ್ಶ, ಇಂದು ನೀನೇ ಬೇಕಾಗಿದೆ....

    ReplyDelete