ಚೌಕಾಸಿ
-----
"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್" ಈ ಕೂಗು ಬೀದಿಯಲ್ಲಿ ದಿನನಿತ್ಯ ಕೇಳಿ ಬರುತ್ತಿದ್ದರೂ...ಎ೦ದಾದರೊ೦ದು ದಿನ ಅಮ್ಮ ಅವನ್ನ ಕರಿಯೋದಿಕ್ಕೆ ಹೇಳಿದ್ರೆ ಸಾಕು.ನಮಗೆ ಒ೦ದೇ
ಖುಷಿ ಕುತೂಹಲ.ಒಬ್ಬನೇ ಇದ್ದರೆ...'ಸ್ವಲ್ಪ ಕೈ ಕೊಡಿ' ಎ೦ದು ನಮ್ಮದೇ ಸಹಾಯ ತೊಗೊ೦ಡು
ಬಾಗಿಲಲ್ಲಿ ಬುಟ್ಟಿ ಇಳಿಸಿದರೆ....ಅದರಲ್ಲಿ ದೊಡ್ಡ ಚಿಕ್ಕ ತರಹತರಹದ ಫಳ ಫಳ ಹೊಳೆಯುವ ಸ್ಟೀಲ್
ಪಾತ್ರೆಗಳು ಮನ ಸೆಳೆಯುತ್ತಿದ್ದವು. ಈಗ ಶುರು. ಅಮ್ಮ ಹೇಳಿ ಒಳಗಿ೦ದ ತ೦ದ ಬಟ್ಟ್ಟೆ ಗ೦ಟು
ಅವನ ಮು೦ದೆ. ಗ೦ಟು ಬಿಚ್ಚಿ...ಒ೦ದೊ೦ದೇ ಬಟ್ಟೆಗಳನ್ನು ಕೈಯಲ್ಲಿ ಹಿಡಿದು ಹರಡಿ ಮುದುರಿ ಪಕ್ಕಕ್ಕೆ
ಇಡುತ್ತಾ...ಎಲ್ಲ ಮುಗಿದ ಮೇಲೆ....'ಬೇರೆ ಇಲ್ಲವಾ' ಎ೦ದು ರಾಗ ಎಳೆಯುತ್ತಾನೆ. ಹಳೆಯ ಷರ್ಟ್ ಗಳು
ಪ್ಯಾ೦ಟ್ ಗಳು ಹರಿದ ಪ೦ಚೆ ..ಇತ್ಯಾದಿ ಇತ್ಯಾದಿ ನೆಲದ ಮೇಲೆ ಬಿದ್ದಿದ್ದವು. ಅಷ್ಟೇ ಎ೦ದು ಅಮ್ಮ ...
"ಏನು ಕೊಡ್ತೀಯಪ್ಪಾ" ಎ೦ದರೆ.....ಒ೦ದು ರೀತಿ ನಕ್ಕ ಅವನು ಸೀರೆ ರೇಶ್ಮೆ ಬಟ್ಟೆ ಇದೆಯಾ ನೋಡಿಮ್ಮ
ಎ೦ದ. ಬೇರೆ ಇಲ್ಲಪ್ಪ....ಇದಕ್ಕೆ ಏನು ಕೊಡ್ತೀಯಾ ಎ೦ದರು ಅಮ್ಮ. ಅವರ ಕಣ್ಣು ದೊಡ್ಡದೊ೦ದು ಡಬ್ಬಿ
ಮೇಲೆ. ಅವನು ಆ ಡಬ್ಬಿ ತೆಗೆದು ಪಕ್ಕ ಇಟ್ಟು ಇನ್ನೊ೦ದರಡು ಪಾತ್ರೆಗಳನ್ನು ಪಕ್ಕ ತಳ್ಳಿ ಒ೦ದು ಸೌಟು ತೆಗೆದ.
ತೊಗೋಳಿ ಈ ಸೌಟು ಬರುತ್ತೆ ಅನ್ನಬೇಕೆ ಆತ. ಸರಿ ಬೇಡ ಬಿಡಪ್ಪಾ...ಇಷ್ಟೊ೦ದು ಬಟ್ಟೆ ಕೊಟ್ಟರೂ ಸಣ್ಣ ಸೌಟು ಕೊಡ್ತೀನಿ ಅ೦ತೀಯಲ್ಲ...ಎ೦ದವರೇ..ಅಮ್ಮ ಇದನ್ನೆಲ್ಲಾ ಒಳಗಿಡು ಎ೦ದು ನನಗ೦ದರು.ಅದು ಸುಮ್ಮನೆ ಎ೦ದು ನನಗೂ ಗೊತ್ತಿತ್ತು.
ಸುಮ್ಮನೆ ಆ ಬಟೆಗಳನ್ನು ತೆಗೆಯ ಹೋದೆ. ನೋಡು ಆ ಡಬ್ಬಿ ಕೊಡೋದಾದ್ರೆ ಕೊಡು ಅ೦ದರು ಅಮ್ಮ. ಸಾಧ್ಯವೇ ಇಲ್ಲ ಎ೦ದವ ಈಗ ಮೆತ್ತಗೆ ಒ೦ದು ಸಣ್ಣ ದಬರಿ ತೆಗೆದು ಮೇಲೆ ೧೦ ರೂ ಕೊಡಿ ಈ ದಬರಿ ಕೊಡ್ತೀನಿ. ಮೇಲೆ ಕೊಡೋದು
ಎಲ್ಲಾ ಏನಿಲ್ಲ ಆ ದೊಡ್ಡ ಡಬ್ಬಿ ಕೊಟ್ರೆ ಕೊಡು ಇಲ್ದಿದ್ರೆ ಬೇಡ.ಈಗ ಅಮ್ಮನ ಮುಖದಲ್ಲಿ ಒ೦ದು ಸಣ್ಣ ಗೆಲುವು ಕಾಣ್ತಾ ಇತ್ತು.
ಇಲ್ಲ ತಾಯಿ ಒ೦ದೂ ರೇಶ್ಮೆ ಕಲಾಪತ್ ಇಲ್ಲ ...ಇದೇ ಹೆಚ್ಚು ನಾ ಕೊಡ್ತಿರೋದು.ನೋಡಿ ಬೇರೆ ಸಿಲ್ಕ್ ...ಯಾವ್ದಾದ್ರೂ ಇದ್ರೆ ನೋಡಿ. ಈಗ ಅಮ್ಮನ್ ಕಣ್ ಸನ್ನೇಗೆ ಕಾಯ್ತಿದ್ದೆ . ಇನ್ನೊ೦ದರಡು ಬಾರಿ ಅವರವರ ಪಟ್ಟು ಬಿಡದೆ ಮಾತನಾಡಿದ
ಮೇಲೆ....ಆ ಕಣ್ಸನ್ನೆ. ಒಳಗೆ ಮೊದಲೇ ಬೇರೆ ಇಟ್ಟಿದ್ದ ಸೀರೆಗಳನ್ನು ಗ೦ಟು ಮಾಡಿ ತ೦ದಿಟ್ಟೆ.ಮತ್ತೆ ..ಎಲ್ಲ ಅಳೆದು ಸುರಿದೂ ನೋಡಿದವ ಈಗ ಆ ಪುಟ್ಟ ಪಾತ್ರೆ ಕೊಟ್ಟು ಎಲ್ಲ ಬಟ್ಟೆಗಳನ್ನು ಗ೦ಟು ಕಟ್ಟಲು ಹೊರಟ.ಆ ಪುಟ್ಟ ಪಾತ್ರೆಗೆ ಅಮ್ಮ ಒಪ್ತಾರಾ!!!ಮತ್ತೆ ಬಟ್ಟೆ ಒಳಗೆ ಇಡುವ ನಾಟಕ. ಈಗ ಕೊಡುವ ಪಾತ್ರೆಯ ಗಾತ್ರ..ದೊಡ್ಡದಾಗುತ್ತಾ ಬ೦ದು...ಕೊನೆಗೆ
ಅದೇ ಡಬ್ಬಿ ಕೊಡುವವರೆಗೂ ಚೌಕಾಸಿ ನಡೆಸಿದ ಅಮ್ಮ..ಗೆಲುವಿನ ನಗೆ ಬೀರಿದರು. ಅವನೂ ಗೊಣಗುತ್ತಲೇ ಬಟ್ಟೆಯೆಲ್ಲಾ ಗ೦ಟು ಕಟ್ಟಿ ಹೊರಟ. ಮತ್ತೆ......"ಸ್ಟೀ...ಲ್ ...ಪಾ...ತ್ರೇ.....ಸಾ..ಮಾ..ನ್". ಅವನಿಗೇನೂ ಮೋಸ ಆಗಿರಲಿಕ್ಕಿಲ್ಲ. ವ್ಯವಹಾರಸ್ಠ. ಅಮ್ಮನಿಗೆ ಚೌಕಾಸಿ ಫಲಪ್ರದ ಆದ ಖುಶಿ. ನನಗೆ..ನನ್ನ ಒಡಹುಟ್ಟಿದವರಿಗೆ...ನಮ್ಮಪ್ಪನಿಗೆ ಸಹ..ಅಚ್ಚರಿ!!!!!!

ಬರಹ ತುಂಬಾ ಚೆನ್ನಾಗಿದೆ ಸರ್ . ನಮ್ಮ ಅಮ್ಮನು ಹೀಗೆ ಮಾಡುತಿದ್ದ ನೆನಪಾಯ್ತು . ಆದ್ರೆ ನಮ್ಮ ತಂದೆಯ ಹತ್ರ ಬೈಸ್ಕೊತಿದ್ರು "ಪಾತ್ರೆ ಅಂಗಡಿಯಲ್ಲಿ ತೊಗೊ, ಬಟ್ಟೆ ಯಾರಿಗಾದರು ಸುಮ್ನೆ ಕೊಡು ................ಅವನು ನಿಂಗೆ ಟೋಪಿ ಹಾಕ್ತಾನೆ ಅಂತ " :D
ReplyDelete