Saturday, 2 May 2015

ಪ್ರೀತಿ ಪ್ರೇಮ

ಹೆತ್ತವರು ಎ೦ದೋ ಕೊಟ್ಟ
ಮಾತಿಗಾಗಿ
ಇವಳೊಡನೆ ಬಾಳಬೇಕಾ?
ತು೦ಬ ಕಲಿತವನೆ೦ಬ ಅಹ೦...
ಅಕ್ಷರ ಕಲಿಯದ ಆಕೆಯ
ಎದೆ
ಬಗೆದೆ....
ಕ೦ಡದ್ದೇನು?
ಪ್ರೀತಿ ಪ್ರೇಮ ಪ್ಯಾರ್ ಲವ್
ಎರಡೆರಡೂವರೆ ಅಕ್ಷರದ
ನನಗೆ ತಿಳಿಯದ ಇನ್ನೂ 
ಎಷ್ಟೋ ಭಾಷೆಗಳಲ್ಲಿ
ಒ೦ದೇ ಭಾವ ರಾಶಿ ರಾಶಿ...
ನಾಚಿದೆ
ಅದೇ ಭಾವದಲಿ ನಾನೂ
ಕೈ ಚಾಚಿದೆ!

1 comment:

  1. ಓದಿಗೂ ಮೀರಿದ ಅಂತರಂಗ ನಲ್ಲೆ ಹೃದಯ
    ಅದು ಸುಗ್ರಾಸ ಗ್ರಂಥಾಲಯ
    ಹಲವು ಪ್ರಕಾರಗಳ ಹಲವು ಭಾಷೆಗಳ
    ಒಲವೇ ಸಾಕ್ಷಾತ್ಕಾರದ ಉದ್ಗ್ರಂತಗಳಿವೆ ಅಲ್ಲಿ!

    ReplyDelete