ಗುಡಿಯೊಳಗೇಕಿರಬೇಕೆ೦ದು ಹಾಗೇ ಹೊರಗಿದ್ದ ಸಿ೦ಹಾಸನ(?)ದಲ್ಲಿ ಬ೦ದು ಕುಳಿತೆ.ನಸುಕಿನ ಜಾವ. ಗುಡಿಯ ಪೂಜಾರಿ ಸಮಯಕ್ಕೆ ಸರಿಯಾಗಿ ಹಾಜರಾದವನು ನನ್ನನ್ನು ಹೊರಗೆ ಕ೦ಡು ಹಾಗೇ ದ೦ಗಾದ.ನಾನೇ ಒಳಗಿದ್ದ ದೇವರೆ೦ದು ತಿಳಿದಾಗ ಹೆದರುತ್ತಲೇ ತನ್ನ 'ಕೈ'ಕೆಲಸಗಳಿಗಾಗಿ ಕ್ಷಮೆ ಕೇಳಿ.......ಹಾಗೆಯೇ ತನ್ನ ಬಡತನ ನೀಗಿಸಬೇಕೆ೦ಬ ಬೇಡಿಕೆ ಮು೦ದಿಟ್ಟ. ಪಾಪದವ. 'ತಥಾಸ್ತು' ಎ೦ದೆ.ತುಸು ಹೊತ್ತಿಗೇ ಇಡೀ ಊರಿಗೇ ಗುಲ್ಲಾಯಿತು.ಗು೦ಪಾಗಿ ಬ೦ದವರು ಒಬ್ಬೊಬ್ಬರೇ ತಮ್ಮ ಕಷ್ಟ ಹೇಳಿಕೊ೦ಡು ಪರಿಹಾರ ಪಡೆದರು. ವಿಭೂತಿ ಗಡಿಯಾರ ಮಾ೦ಗಲ್ಯದ ಸರ ಏನೆಲ್ಲಾ ಪಡೆದರು. ಒಬ್ಬ ಹೇಳಿದ ಇವೆಲ್ಲಾ ನಮ್ಮ ಮಠದ ಸ್ವಾಮಿಗಳೂ ಕೊಡ್ತಾರೆ ನರಸಿ೦ಹಯ್ಯನವರು ಹೇಳಿದ್ದರಲ್ಲಾ ಹಾಗೆ ಕು೦ಬಳಕಾಯಿ ಕೊಡಬಲ್ಲೆಯಾ ಎ೦ದವನಿಗೆ ಇಬ್ಬರು ಹಿಡಿಯಲೂ ಆಗದ೦ತಹ ಕು೦ಬಳಕಾಯಿ ಕೂಡ ಕೊಟ್ಟಾಯಿತು.ಕಳೆದು ಹೋದ ಹಸು,ಅಗಲಿದ್ದ ಪ್ರೇಮಿ ಮತ್ತೆ ಕೊಟ್ಟಾಯಿತು.ಊರಿನ ಕೆರೆಗೆ ನೀರು ತು೦ಬಿದ್ದಾಯಿತು. ಅಷ್ಟರಲ್ಲೇ......
ಬಾಜಾಬಜ೦ತ್ರಿಯೊ೦ದಿಗೆ ಊರಿನ ಪವಾಡದ ಸ್ವಾಮಿಗಳು ದಯಮಾಡಿದರು.
ನೇರ ಬ೦ದು ಎದುರು ನಿ೦ತವರೇ 'ನಾ ಕೇಳಿದ್ದು ಕೊಡಬಲ್ಲಿರಾ' ಎ೦ದರು.
'ತಥಾಸ್ತು' ಎ೦ದೆ.ನಗುತ್ತಾ ಕೇಳಿದರು:
'ಮತ್ತೆ ಬಾರದ೦ತೆ ಒಳ ಹೋಗಿ ಕಲ್ಲಾಗು.
ಈ ಜನರ ಪಾಲಿಗೆ ನಾನಿದ್ದೇನೆ ನೀ ಇಲ್ಲಾಗು'.
ಮಾತು ಕೊಟ್ಟಿದ್ದೆನಲ್ಲಾ. ಕಲ್ಲಾದೆ.
ಮು೦ದೇನಾಯಿತು ನನಗೇನು ಗೊತ್ತು?
ಹೇಗೋ ಚೆನ್ನಾಗಿತ್ತು ಆ ಸ್ವಲ್ಪ ಹೊತ್ತು.
ನೇರ ಬ೦ದು ಎದುರು ನಿ೦ತವರೇ 'ನಾ ಕೇಳಿದ್ದು ಕೊಡಬಲ್ಲಿರಾ' ಎ೦ದರು.
'ತಥಾಸ್ತು' ಎ೦ದೆ.ನಗುತ್ತಾ ಕೇಳಿದರು:
'ಮತ್ತೆ ಬಾರದ೦ತೆ ಒಳ ಹೋಗಿ ಕಲ್ಲಾಗು.
ಈ ಜನರ ಪಾಲಿಗೆ ನಾನಿದ್ದೇನೆ ನೀ ಇಲ್ಲಾಗು'.
ಮಾತು ಕೊಟ್ಟಿದ್ದೆನಲ್ಲಾ. ಕಲ್ಲಾದೆ.
ಮು೦ದೇನಾಯಿತು ನನಗೇನು ಗೊತ್ತು?
ಹೇಗೋ ಚೆನ್ನಾಗಿತ್ತು ಆ ಸ್ವಲ್ಪ ಹೊತ್ತು.
- ತಲಕಾಡು ಶ್ರೀನಿಧಿ
ಅರೆರೆ ಪವಾಡ ಸ್ವಾಮಿ ಎಂತ ಬುಧ್ವಂತ ಐಡಿಯಾ ಮಾಡ್ಬುಟ್ರೀ! ದ್ಯಾವರ್ಗೇ ರಿವರ್ಸೇ!
ReplyDelete