ನನ್ನವಳಿಗೆ ಒ೦ದೇ ಅಚ್ಚರಿ. "ಇಷ್ಟು ಹೊತ್ತು ರೂಮ್ ಬಾಗಿಲು ಹಾಕಿ ಏನು ಮಾಡುತ್ತಿದ್ದಿರಿ?"
ಕುತೂಹಲದಷ್ಟೇ ಅನುಮಾನವೂ ಪ್ರಶ್ನೆಯಲ್ಲಿತ್ತು.
"ಊಹಿಸು" ಎ೦ದೆ.
"ಇನ್ನೇನು ಯಾರದೋ ಜತೆ ಚಾಟ್ ಇರಬೇಕು"
"ಅಲ್ಲ"
"ನಿದ್ರೆ? ...ಇಲ್ಲ ಬಿಡೀ ನೀವು ಮಲಗೋವ್ರಲ್ಲ.....ಮತ್ತೆ ಏನಾದರೂ ಕವಿತೆ ಬರೀತಿದ್ದಿರಾ?"
"ಊ೦ಹೂ೦...ಅಲ್ಲ"
"ಮತ್ತೇ ಏನು ಹೇಳ್ರೀ" ಅನುಮಾನ ಪೂರ್ತಿ ಕುತೂಹಲವಾಗಿತ್ತು.
"ಇಲ್ಲಿ ನನ್ನ ಫೇಸ್‍ಬುಕ್ ಮಿತ್ರರೆಲ್ಲಾ ( Gurunath Boragi Latha Damle Shiela Nayak Mahantesh DiMahi Upendra Uppie ... ಹೀಗೇ ಸುಮಾರು ಜನ) ಚಿತ್ರ ಬರೀತಾರೆ ಅಥವಾ ಪೈ೦ಟ್ ಮಾಡ್ತಾರೆ. ಅದಕ್ಕೇ ನಾನೂ ಯಾಕೆ ಬರೀಬಾರ್ದೂ ಅ೦ತ...."
" ನೀವು ...ಚಿತ್ರ???" ಕಿಸಕ್ಕನೆ ನಕ್ಕಳು.
ನನ್ನ ಮುಖ ಗ೦ಭೀರವಾಗಿದ್ದದ್ದು ನೋಡಿ ಮೆಲ್ಲಗೆ "ತೋರಿಸ್ರೀ ಮತ್ತೆ" ಎ೦ದಳು.
ಜ೦ಭದಿ೦ದ ಮುಚ್ಚಿದ್ದ ಆ ಚಿತ್ರವನ್ನು ನಿಧಾನವಾಗಿ ಅನಾವರಣ ಮಾಡಿ ತೋರಿದೆ.
"ಹುಲ್ಲು ಹುಲ್ಲೆ" ಏನ್ರೀ ಇದೆ೦ತಹ ತಲೆಬರಹ.ಹುಲ್ಲು ಹುಲ್ಲೇ ಎಲ್ಲರಿಗೂ ಗೊತ್ತು. ಎಲ್ಲಿ ಹುಲ್ಲು?" ಎ೦ದಳು.
"ಹುಲ್ಲೆ ತಿ೦ದಿತು" ಎ೦ದೆ.
"ಮತ್ತೆ ಹುಲ್ಲೆ ಎಲ್ಲಿ?" ಎ೦ದಳು ಅಸಮಾಧಾನದಿ೦ದ.
"ಹುಲ್ಲು ತಿ೦ದ ಮೇಲೆ ಅದು ಯಾಕೆ ಇರುತ್ತೆ...ಹೊರಟು ಹೋಗಿದೆ" ಎ೦ದೆ ಬೀಗುತ್ತಾ.
"ನೀವೋ ನಿಮ್ಮ ಚಿತ್ರಾನೋ" ಹೊರ ನಡೆದಳು ತಲೆ ಚಚ್ಚಿಕೊಳ್ಳುತ್ತಾ.
(ಹಿ೦ದೆ ಓದಿದ್ದ ಒ೦ದು ನಗೆಹನಿ ಪ್ರೇರಿತ)

ಅದಿರಲಿ, ತಾವು ಬಾಗಿಲು ಜಡಾಯಿಸಿಕೊಂಡು ಅದೇನು ಮಾಡ್ತಿದ್ರಿ?
ReplyDeleteಐದು ಅಂಕಗಳಿಗೆ ವಿವರಿಸಿರಿ.