Thursday, 9 April 2015

ಮುತ್ತು

ಸಾಕಾಯಿತು ಕತ್ತಲು
ಇಲ್ಲೆಲ್ಲೋ ಕಳೆದಿದೆ ಮುತ್ತು
ಗೊಣಗಿದಳಾಕೆ
ಚ೦ದ್ರ ಸೂರ್ಯರನು
ತರುವೆ ಕಿತ್ತು
ಎದೆ ತಟ್ಟಿ ನಿ೦ತೆ
ಗೊತ್ತು.....ಗೊತ್ತು
ನಿಮ್ಮ ತಾಕತ್ತು
ಮೊದಲೇ ಕುಳ್ಳ
ಏಣಿಯೂ ಇಲ್ಲ
ಬಲ್ಬ್ ಬದಲಿಸಬೇಕಿತ್ತು
ನಿನ್ನ ಕಣ್ಣ ಬೆಳಕಲಿ
ಕಾಣುತಿದೆ ಕೆನ್ನೆ ತುಟಿ ಗಲ್ಲ
ಇರಲಿ ಬಿಡು ಕತ್ತಲೇ
ನನಗೂ ಬೇಕಿತ್ತು
ಒ೦ದು ಎರಡು....ಹತ್ತು!

1 comment:

  1. ಮುತ್ತು ಹುಡುಕಿ ಕೊಡುವ ನೆಪದಲ್ಲೆರಡು ಮುತ್ತು ಪೋಣಿಸಿ ರಸಿಕ ಕವಿಗಳೇ,
    ಬಲ್ಬು ಹೊತ್ತಿದರೆ ಮತ್ತೆಲ್ಲಿದೆ ಕತ್ತಲೆಯ ಸದುಪಾಯಗಳು! ;-)

    ReplyDelete