Thursday, 23 April 2015

ನಾನಿಲ್ಲದೆ ನೀನಿಲ್ಲ

ನಾನಿಲ್ಲದೆ
ನೀನಿಲ್ಲವೆ೦ಬ ಅರಿವೇ
ಇಲ್ಲವೇ ನಿನಗೆ?
ನನಗಿ೦ತ ಬೆಳೆವ
ಉದ್ಧಟತನವೇ....
ನೆನಪಿರಲಿ ಇದು
ಆ ಉರಿವ ರವಿಯ ಭಿಕ್ಷೆ!
ಒಮ್ಮೆ ನಾ ಅವನೆಡೆ
ಮುಖ ಮಾಡಿ ನಡೆ-
ದರೆ ನೀ ನನ್ನತ್ತ
ನೋಡುವ೦ತೆಯೂ ಇಲ್ಲ!
ನನ್ನ ಬೆನ್ನ ಹಿ೦ದೆ
ಮುಖ ಮರೆಸಿ ನಡೆವುದಷ್ಟೇ
ನೆರಳಾಗಿ ನಿನ್ನ
ಹಣೆಬರಹ!!

1 comment:

  1. ನರಳಿನ ಅಸ್ಥಿತ್ವವೇ ಅಶಾಶ್ವತ!
    ಬೆಳಕಿದ್ದಾಗ ಹಲವುದ್ದ, ಇರುಳದು ಎಲ್ಲಿದ್ದಿ?

    ReplyDelete