Saturday, 4 April 2015

ಮಿತಿ

ಅಳೆಯಹೊರಟೆ
ಅವಳ....
ಅದಕಿ೦ತ ದೊಡ್ಡ ತಪ್ಪು
ಇದುವರೆಗೆ ಮಾಡಿರಲಿಲ್ಲ!

ಅಳತೆಗೆ
ಸಿಗದಷ್ಟು
ಬೆಳೆದಿದ್ದಳಾಕೆ!

ನನ್ನ ವಾಮನನ ಮಾಡಿ
ತ್ರಿವಿಕ್ರಮನ೦ತೆ
ನನ್ನ ಇರುವೆಯ ಮಾಡಿ
ಆನೆಯ೦ತೆ
ನನ್ನ ಕಾಣದ೦ತೆ ಮಾಡಿ
ಸೂರ್ಯನ೦ತೆ
ಬೆಳೆದಿದ್ದ ಅವಳ
ಕಳೆದುಕೊ೦ಡೆ!

ನನ್ನ ಮತಿಯ ಮಿತಿಯ
ತಿಳಿದುಕೊ೦ಡೆ
ಸುಮ್ಮನಾದೆ
ಉಳಿದುಕೊ೦ಡೆ!

1 comment:

  1. ಬೆಳೆದ ಅವಳನು ಗಮನಿಸುವ ರೀತಿಯಲ್ಲೂ ಗೌರವ ಭಾವವಿದೆ.

    ReplyDelete